ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರನ್ನು ಲೋಕಸಭೆ ಕಲಾಪದಿಂದ ಅಮಾನತು ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಮುಗಿಯುತ್ತಿದ್ದಂತೆ ಅಧೀರ್ ರಂಜನ್ ಅವರನ್ನು ಸದನದಿಂದ ಅಮಾನತು ಮಾಡುವ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನಿರ್ಣಯ ಮಂಡಿಸಿದರು.
ಆ ನಿರ್ಣಯವನ್ನು ಲೋಕಸಭೆಯಲ್ಲಿ ಧ್ವನಿಮತದಿಂದ ಅಂಗೀಕರಿಸಲಾಯಿತು.
ಅಧೀರ್ ರಂಜನ್ ಅವರ ವಿರುದ್ಧದ ತನಿಖೆ ನಡೆಸಲು ಹಕ್ಕುಭಾಧ್ಯತಾ ಸಮಿತಿ ಶಿಫಾರಸ್ಸು ಮಾಡಿ ಸಮಿತಿಯ ವರದಿ ಬರುವವರೆಗೆ ಲೋಕಸಭೆಯಲ್ಲಿ ಅಮಾನತು ಮಾಡುವ ನಿರ್ಣಯ ಅಂಗೀಕರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ವೇಳೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಅಧೀರ್ ರಂಜನ್ ಚೌಧರಿ ಅವರ ವಿರುದ್ಧ ಈ ಕ್ರಮಕೈಗೊಳ್ಳಲಾಗಿದೆ.
ADVERTISEMENT
ADVERTISEMENT