Mangaluru: ಪೋಷಕರೇ ಎಚ್ಚರ: ಮಾದಕ ದ್ರವ್ಯ ಲೇಪಿತ 120 ಕೆಜಿಯಷ್ಟು ಚಾಕೋಲೇಟ್​ ವಶ, ಇಬ್ಬರ ಬಂಧನ

ಮಹತ್ವ ಕಾರ್ಯಾಚರಣೆಯಲ್ಲಿ ಮಂಗಳೂರು ಪೊಲೀಸರು ಮಾದಕದ್ರವ್ಯ ಲೇಪಿತ 120 ಕೆಜಿಯಷ್ಟು ತೂಕದ ಚಾಕೋಲೇಟ್​ಗಳನ್ನು ವಶಪಡಿಸಿಕೊಂಡಿದ್ದಾರೆ. 

ಎರಡು ಅಂಗಡಿಗಳ ಮೇಲೆ ಮಂಗಳೂರು ನಗರ ಪೊಲೀಸರು ದಾಳಿ ನಡೆಸಿದ್ದು ಒಂದು ಅಂಗಡಿಯಿಂದ ಮಾದಕ ದ್ರವ್ಯ ಲೇಪಿತ 85 ಕೆಜಿ ಚಾಕೋಲೇಟ್​ ಮತ್ತು ಇನ್ನೊಂದು ಅಂಗಡಿಯಿಂದ 35 ಕೆಜಿಯಷ್ಟು ಚಾಕೋಲೇಟ್​​ನ್ನು ವಶಪಡಿಸಿಕೊಂಡಿದ್ದಾರೆ.

ಎರಡೂ ಅಂಗಡಿಗಳ ಮಾಲೀಕರನ್ನು ಬಂಧಿಸಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಾದಕದ್ರವ್ಯ ಲೇಪಿತ ಚಾಕೋಲೇಟ್​ಗಳನ್ನು 20 ರೂಪಾಯಿಯಂತೆ ಮಾರಲಾಗುತ್ತಿತ್ತು.

ಈ ಚಾಕೋಲೇಟ್​ಗಳಲ್ಲಿ ಮಾದಕದ್ರವ್ಯ ಮರಿಜುವನಾ ಇದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸಾಬೀತಾಗಿದೆ ಎಂದು ಮಂಗಳೂರು ನಗರ ಪೊಲೀಸ್​ ಆಯುಕ್ತ ಕುಲದೀಪ್​ ಜೈನ್​ ಹೇಳಿದ್ದಾರೆ.

ಈ ಚಾಕೋಲೇಟ್​ಗಳನ್ನು ಉತ್ತರ ಭಾರತದಿಂದ ವಿಶೇಷವಾಗಿ ಉತ್ತರಪ್ರದೇಶದಿಂದ ಕಳ್ಳಸಾಗಾಣಿಕೆ ಮಾಡಲಾಗಿದೆ ಎಂದು ಪೊಲೀಸ್​ ಆಯುಕ್ತರು ಹೇಳಿದ್ದಾರೆ.

ಇತ್ತೀಚೆಗೆ ರಾಯಚೂರು ಜಿಲ್ಲೆಯಲ್ಲೂ ಮಾದಕದ್ರವ್ಯ ಲೇಪಿತ ಚಾಕೋಲೇಟ್​ ಮಾರುತ್ತಿದ್ದ ಇಬ್ಬರು ಅಂಗಡಿ ಮಾಲೀಕರನ್ನು ಬಂಧಿಸಲಾಗಿತ್ತು.

LEAVE A REPLY

Please enter your comment!
Please enter your name here