ಉರಿಗೌಡ-ನಂಜೇಗೌಡ ಸಿನಿಮಾದ ಪೋಸ್ಟರ್​ ಬಿಡುಗಡೆ – ಸಿ ಟಿ ರವಿ, ಅಶೋಕ್​ ಅರ್ಪಿಸುವ ಸಿನಿಮಾಕ್ಕೆ ಅಶ್ವತ್ಥ್​ ನಾರಾಯಣ್​ ಕಥೆ..!

ಬಿಜೆಪಿ ಸರ್ಕಾರದ ಸಚಿವ, ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ನಿರ್ಮಿಸುತ್ತಿರುವ ಉರಿಗೌಡ-ನಂಜೇಗೌಡ ಸಿನಿಮಾದ ಮೊದಲ ಪೋಸ್ಟರ್​ ಬಿಡುಗಡೆ ಆಗಿದೆ.

ಮೇ 18ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

1750ರಿಂದ 1799ರವರೆಗೆ ನಡೆದಿರುವ ಐತಿಹಾಸಿಕ ಘಟನೆಗಳನ್ನು ಆಧರಿಸಿ ಸಿನಿಮಾ ನಿರ್ಮಾಣವಾಗಲಿದೆ ಎಂದು ಪೋಸ್ಟರ್​ನಲ್ಲಿ ಹೇಳಲಾಗಿದೆ. 

ಸಚಿವ ಆರ್​ ಅಶೋಕ್​ ಮತ್ತು ಸಿ ಟಿ ರವಿ ಅರ್ಪಿಸುವ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ ಚಿತ್ರಕಥೆ ಸಚಿವ ಅಶ್ವತ್ಥ್​ ನಾರಾಯಣ ಅವರದ್ದು. ಆರ್​ ಎಸ್​ ಗೌಡ ಅವರು ನಿದೇಶಿಸ್ತಿಸ್ತಿದ್ದಾರೆ.

ಇತಿಹಾಸದಲ್ಲಿಲ್ಲದ ಊರಿಗೌಡ-ನಂಜೇಗೌಡ ಪಾತ್ರವನ್ನು ಸೃಷ್ಟಿಸುವ ಮೂಲಕ ಒಕ್ಕಲಿಗ ಸಮುದಾಯವನ್ನು ಒಡೆಯುವ ಮತ್ತು ಅಪಮಾನಿಸುವ ಕೃತ್ಯವನ್ನು ಬಿಜೆಪಿ ಮಾಡ್ತಿದೆ ಎಂಬ ಆರೋಪಗಳ ನಡುವೆ  ಸಿನಿಮಾ ಪೋಸ್ಟರ್​ನ್ನು ಬಿಡುಗಡೆ ಮಾಡಲಾಗಿದೆ.

ಚಿತ್ರಕ್ಕೆ ಅನುಮತಿ ನೀಡಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒಕ್ಕಲಿಗರ ಸಂಘ ಪತ್ರ ಬರೆದಿತ್ತು.

LEAVE A REPLY

Please enter your comment!
Please enter your name here