ಮಾರ್ಚ್ 21ರಂದು ಕರೆ ನೀಡಿದ್ದ ಮುಷ್ಕರವನ್ನು ನಾಲ್ಕೂ ಸಾರಿಗೆ ನಿಗಮಗಳ ಸಿಬ್ಬಂದಿ ವಾಪಸ್ ಪಡೆದಿದ್ದಾರೆ.
ಮೂರು ಪ್ರಮುಖ ಬೇಡಿಕೆಗಳನ್ನೂ ಈಡೇರಿಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್ ಪಡೆಯಲಾಗಿದೆ.
ವೇತನ ಹೆಚ್ಚಳವನ್ನು 2020ರ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸುವುದಕ್ಕೆ ಸರ್ಕಾರ ಒಪ್ಪಿಕೊಂಡಿದೆ.
ಮುಷ್ಕರದ ವೇಳೆ ವಜಾಗೊಂಡಿದ್ದ ನೌಕರರನ್ನು ವಾಪಸ್ ಸೇವೆಗೆ ಸೇರಿಸಿಕೊಳ್ಳಲು ಸರ್ಕಾರ ಒಪ್ಪಿದೆ.
ವಾರ್ಷಿಕ ವೇತನದ ಬಡ್ತಿ ಹೆಚ್ಚಳಕ್ಕೂ ಸರ್ಕಾರ ಒಪ್ಪಿಕೊಂಡಿದೆ.
ಇವತ್ತು ಸಂಜೆ 5 ಗಂಟೆಯಿಂದ ಸಾರಿಗೆ ಸಿಬ್ಬಂದಿಯ 8 ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಸುಬ್ಬರಾವ್ ಅವರ ಜೊತೆಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ನಡೆಸಿರುವ ಮಾತುಕತೆ ಯಶಸ್ವಿಯಾಗಿದೆ.
ADVERTISEMENT
ADVERTISEMENT