ಸಿದ್ದರಾಮಯ್ಯ ಭಾಗವಹಿಸಬೇಕಿದ್ದ 7 ಜಿಲ್ಲೆಗಳ ಪ್ರಜಾಧ್ವನಿ ಯಾತ್ರೆ ದಿಢೀರ್​ ಮುಂದೂಡಿಕೆ

ಏಳು ಜಿಲ್ಲೆಗಳಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೈಗೊಳ್ಳಬೇಕಿದ್ದ ಪ್ರಜಾಧ್ವನಿಯಾತ್ರೆ ದಿಢೀರ್​ ಮುಂದೂಡಿಕೆಯಾಗಿದೆ.

9 ದಿನಗಳ ಪ್ರಜಾಧ್ವನಿಯಾತ್ರೆಯನ್ನು ಮುಂದೂಡಲಾಗಿದೆ.

ಮಾರ್ಚ್​ 24ರಿಂದ ಮಾರ್ಚ್​ 31ರವರೆಗೆ 8 ದಿನ ಮತ್ತು ಏಪ್ರಿಲ್​ 1ರಂದು ಸಿದ್ದರಾಮಯ್ಯ ಅವರು ಪ್ರಜಾಧ್ವನಿಯಾತ್ರೆಯಲ್ಲಿ ಪಾಲ್ಗೊಳ್ಳಬೇಕಿತ್ತು.

ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ, ಉತ್ತರ ಕನ್ನಡ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಾಂಗ್ರೆಸ್​ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಮುಂದೂಡಿಕೆಯಾಗಿದೆ.

LEAVE A REPLY

Please enter your comment!
Please enter your name here