ಕಾಂಗ್ರೆಸ್​ ಶಾಸಕಿ, ಟಿಎಂಸಿ ಸಂಸದೆಯನ್ನು ವೇಶ್ಯೆಗೆ ಹೋಲಿಸಿದ ಬಿಜೆಪಿ ಸಂಸದ ..!

ಕಾಂಗ್ರೆಸ್​ ಶಾಸಕಿ ಮತ್ತು ಟಿಎಂಸಿ ಸಂಸದೆಯನ್ನು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ವೇಶ್ಯೆಯರಿಗೆ ಹೋಲಿಸಿ ಅವಮಾನಿಸಿದ್ದಾರೆ.

ಜಾರ್ಖಂಡ್​ ರಾಜ್ಯದ ಕಾಂಗ್ರೆಸ್​ ಶಾಸಕಿ ದೀಪಿಕಾ ಸಿಂಗ್​ ಪಾಂಡೆ ಮತ್ತು ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಮೌಹಾ ಮೊಯಿತ್ರಾ ಬಗ್ಗೆ ದುಬೆ ಅಸಭ್ಯ, ಅಶ್ಲೀಲ ಟ್ವೀಟ್​ ಮಾಡಿದ್ದಾರೆ.

ಮಹಿಳಾ ಶಾಸಕಿ ಮತ್ತು ಸಂಸದೆ ಬಗ್ಗೆ ಮಾಡಿರುವ ಅಸಭ್ಯ ಟೀಕೆಗಳ ಬಗ್ಗೆ ಕಾಂಗ್ರೆಸ್​ ಆಕ್ಷೇಪವನ್ನು ವ್ಯಕ್ತಪಡಿಸಿದೆ. 

ನಿಶಿಕಾಂತ್​ ದುಬೆ ಅವರು ಒಬ್ಬರು ಮಹಿಳಾ ಶಾಸಕಿಯನ್ನು ಮತ್ತು ಸಂಸದೆಯನ್ನು ವೈಶಾಲಿಯ ನಗರ ವಧು ಅಂದರೆ ವೇಶ್ಯೆ ಎಂದು ಕರೆದಿದ್ದಾರೆ. ಇಂತಹ ಅಜ್ಞಾನಿ ವ್ಯಕ್ತಿ ಸಂಸತ್ತಿನಲ್ಲಿರುವುದು ಶಾಪ. ನಿಷಿಕಾಂತ್​ ದುಬೆ ದೇಶದ ಮಹಿಳೆಯರ ಕ್ಷಮೆ ಕೇಳಬೇಕು, ಶಾಸಕಿ ಮತ್ತು ಸಂಸದೆಯ ಕ್ಷಮೆ ಕೇಳಬೇಕು. ನಿನ್ನ ಇಂತಹ ಮನಸ್ಥಿತಿ ಬಗ್ಗೆ ಅಸಹ್ಯ ಎನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಮೃತಿ ಇರಾನಿ ಸುಮ್ಮನಿರುತ್ತಾರೆ

ಎಂದು ಕಾಂಗ್ರೆಸ್​ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here