Rishab shetty – ಸಾಲಗಾರರ ಕಾಟ ತಾಳದೇ ಮಾರುವೇಶದಲ್ಲಿ ರಿಶಬ್ ಶೆಟ್ಟಿ ತಿರುಗಿದ್ದರು ಗೊತ್ತಾ..?

ಕಾಂತಾರ ರಿಶಬ್ ಶೆಟ್ಟರ ಬಗ್ಗೆ ನಿಮಗೆಷ್ಟು ಗೊತ್ತು?
* ಕುಂದಾಪುರದ ಕೆರಾಡಿಯ ಜ್ಯೋತಿಷಿ ಭಾಸ್ಕರ ಶೆಟ್ಟರ ಪುತ್ರ
* ಚಿಕ್ಕಂದಿನಿಂದಲೇ ರಾಜಕುಮಾರ್ ಹಾಡುಗಳಂದ್ರೇ ತುಂಬಾ ಇಷ್ಟ
* ಚಿಕ್ಕ ವಯಸ್ಸಿನಲ್ಲೇ ಮೀನಾಕ್ಷಿ ಕಲ್ಯಾಣಿ ಯಕ್ಷಗಾನದಲ್ಲಿ ನಟನೆ

ವಾಟರ್ ಕ್ಯಾನ್ ಬಾಯ್
* ಜೀವನ ಶುರು ಮಾಡಿದ್ದು ವಾಟರ್ ಕ್ಯಾನ್ ಬಾಯ್ ಆಗಿ
* ಹಗಲಿನಲ್ಲಿ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಶಿಕ್ಷಣ
* ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಾತ್ರಿ ಹೊತ್ತು ಮಿನರಲ್ ವಾಟರ್ ಸಪ್ಲೈ
* ಕೆಲಸ ಮುಗಿದ ಮೇಲೆ ವಾಟರ್ ಸಪ್ಲೈ ವ್ಯಾನ್‌ನಲ್ಲೇ ನಿದ್ದೆ

ಚಿತ್ರರಂಗಕ್ಕೆ ಎಂಟ್ರಿ – 50 ರೂ. ಕೂಲಿ.. 100 ರೂ. ಖರ್ಚು
* ಕ್ಲಬ್ ಒಂದಕ್ಕೆ ನೀರು ಸಪ್ಲೈ ಮಾಡುವಾಗ ನಿರ್ಮಾಪಕ ಎಂಡಿ ಪ್ರಕಾಶ್ ಕಣ್ಣಿಗೆ
* ಅವಕಾಶ ಕೇಳಿದ್ದಕ್ಕೆ ವಿಚಿತ್ರವಾಗಿ ನೋಡಿದ್ದ ನಿರ್ಮಾಪಕ ಎಂಡಿ ಪ್ರಕಾಶ್
* ಫಿಲಂ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿ ಎಂದಾಗ ಸೈನೈಡ್‌ನಲ್ಲಿ ಸಹಾಯಕ ನಿರ್ದೇಶಕನ ಪಾತ್ರ
* ದಿನಕ್ಕೆ 50 ರೂಪಾಯಿ ಕೂಲಿ.. ಶೂಟಿಂಗ್ ಸ್ಪಾಟ್‌ಗೆ ಹೋಗಲು 100 ರೂ. ಖರ್ಚು

ಕೋಪದ ನಿರ್ದೇಶಕರಿಂದ ಹೊಡೆಸಿಕೊಂಡಿದ್ದ ರಿಶಬ್
* ರವಿಶ್ರೀವತ್ಸ ನಿರ್ದೇಶನದ ಗಂಡ ಹೆಂಡತಿ ಸಿನಿಮಾ ಯೂನಿಟ್‌ನಲ್ಲಿ ಕ್ಲಾಪ್ ಬಾಯ್ ಆಗಿ ಕೆಲಸ
* ಒಮ್ಮೆ ಕ್ಯಾಮೆರಾಮನ್ ಸೂಚನೆ ಮೇರೆಗೆ ಒಂದೆಡೆ ನಿಂತಿದ್ದಾಗ ಇಲ್ಯಾಕೆ ನಿಂತೆ ಎಂದು ಕೋಪದಿಂದ ತಲೆಗೆ ಮೊಟಕಿದ್ದ ರವಿಶ್ರೀವತ್ಸ
* ಕೋಪಗೊಂಡು ಹೇಳದೇ ಕೇಳದೇ ಆ ಸಿನಿಮಾದಿಂದ ಹೊರಗೆ ಬಂದಿದ್ದ ರಿಶಬ್ ಶೆಟ್ಟಿ

25ಲಕ್ಷ ಸಾಲ.. ಸಾಲಗಾರರ ಕಾಟಕ್ಕೆ ಮಾರುವೇಶದಲ್ಲಿ ಓಡಾಟ
* 2009 ರಲ್ಲಿ ಹೋಟೆಲ್ ಆರಂಭ.. ಐದು ತಿಂಗಳಿಗೆ ಭಾರೀ ನಷ್ಟ.. 25 ಲಕ್ಷ ಸಾಲದ ಹೊರೆ
* ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಸಿನಿಮಾಗೆ ಹಚ್ಚಿದ ವೇಶದಲ್ಲೇ ಹೊರಗೂ ತಿರುಗಾಟ
* ಒಮ್ಮೆ ಬೇಕರಿಗೆ ಹೋದಾಗ 18 ರೂ. ಬಿಲ್ ಆಯ್ತು..ಆದರೆ ಜೇಬಲ್ಲಿ ಇದ್ದಿದ್ದು 17 ರೂ.

ರಿಶಬ್ ಶೆಟ್ಟಿ ಹೆಸರು ಮೂಲ ಹೆಸರಲ್ಲ
* ರಿಶಬ್ ಶೆಟ್ಟಿ ಎಂಬುದು ಮೂಲ ಹೆಸರಲ್ಲ.. ಮೂಲ ಹೆಸರು ಪ್ರಶಾಂತ್ ಶೆಟ್ಟಿ
* ತುಘ್ಲಕ್ ಸಿನಿಮಾದಲ್ಲಿ ನಟಿಸುವ ವೇಳೆ ಹೆಸರು ಬದಲಿಸಿಕೊಂಡ ರಿಶಬ್
* ನಾಲ್ಕು ವರ್ಷಗಳ ಕಾಲ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟನೆ
* ತುಘ್ಲಕ್ ಫ್ಲಾಪ್ ಆದ ನಂತರ ಮಾನಸಿಕವಾಗಿ ಕುಗ್ಗಿದ್ದ ರಕ್ಷಿತ್ ಶೆಟ್ಟಿ

ಲಕ್ ಬದಲಿಸಿದ ರಿಕ್ಕಿ.. ರಕ್ಷಿತ್ ಶೆಟ್ಟಿ
* ರಿಶಬ್ ಹೇಳಿದ ರಿಕ್ಕಿ ಕಥೆ ನಂಬಿ ನಿರ್ದೇಶಕನಾಗಲು ಚಾನ್ಸ್ ನೀಡಿದ ರಕ್ಷಿತ್
* ರಿಕ್ಕಿ ಹಿಟ್.. ಮಿತ್ರರ ಜೊತೆ ಸೇರಿದ ಮಾಡಿದ ಕಿರಿಕ್ ಪಾರ್ಟಿ ಹಿಟ್
* ಕಿರಿಕ್ ಪಾರ್ಟಿಯಿಂದ ಬಂದ ದುಡ್ಡಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಕಾಸರಗೋಡು ನಿರ್ಮಾಣ, ರಾಷ್ಟ್ರೀಯ ಪ್ರಶಸ್ತಿ
* ಬೆಲ್ ಬಾಟಮ್ ಮೂಲಕ ಹೀರೋ ಆಗುವ ಕನಸು ನನಸು

ಕಾಂತಾರಗೆ ಅಪ್ಪು ಹೀರೋ ಆಗಬೇಕಿತ್ತು.. ಆದರೇ..
* ಕಾಂತಾರ ಕಥೆ ರಿಶಬ್‌ದು.. ಹೊಂಬಾಳೆಗೆ ಹೇಳಿ ನಿರ್ಮಾಣ
* ಮೊದಲು ಅಪ್ಪುರನ್ನು ಹೀರೋ ಆಗುವಂತೆ ರಿಶಬ್ ಸಂಪರ್ಕ
* ಕಥೆ ಕೇಳಿದ ಅಪ್ಪು.. ನೆಲದ ಸೊಗಡು ಪರಿಮಳಿಸಬೇಕು ಎಂದರೇ ನೀನೇ ಹೀರೋ ಎಂದಿದ್ದರು
* ಹೀಗಾಗಿ ಕಾಂತಾರಗೆ ಹೀರೋ ಆಗಿದ್ದು ರಿಶಬ್ ಶೆಟ್ಟಿ.. 16 ಕೋಟಿ ಬಂಡವಾಳ.. ನೂರಾರು ಕೋಟಿ ಲಾಭ

ಸೆಲ್ಫಿ ತೆಗೆಸಿಕೊಳ್ಳಲು ಬಂದು ಸಂಗಾತಿಯಾದಳು
* ರಿಕ್ಕಿ ಸಕ್ಸಸ್ ಮೀಟ್ ವೇಳೆ ಬೆಂಗಳೂರಿನ ಮಾಲ್‌ನಲ್ಲಿ ಸೆಲ್ಫಿ ಪಡೆಯಲು ಬಂದ ಯುವತಿ ಪ್ರಗತಿ ಜೊತೆ ಜೊತೆ ಲವ್, ಮದುವೆ
* ಕಾಂತಾರ ಶೂಟಿಂಗ್ ವೇಳೆ ಪ್ರಗತಿ ಗರ್ಭಿಣಿ.. ಶೂಟಿಂಗ್ ಮುಗಿಯುವ ಹೊತ್ತಿಗೆ ಹೆರಿಗೆ..
* ಕಾಂತಾರ ಚಿತ್ರದ ಡಿಸೈನರ್ ಆಗಿಯೂ ಕೆಲಸ ಮಾಡಿದ್ದ ಪ್ರಗತಿ ರಿಶಬ್