Mulabagilu – ಜಗನ್ ಮೋಹನ್ ರೆಡ್ಡಿ ಪತ್ನಿಗೆ ಗೆಲುವು

ಮುಳಬಾಗಲು ನಗರಸಭೆಯ ಎರಡನೇ ವಾರ್ಡ್ ಗೆ ನಡೆದಿದ್ದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಜಗನ್ ಮೋಹನ್ ರೆಡ್ಡಿ ಪತ್ನಿ (Jagan mohan reddy wife )ನಿರುಪಮಾ ಜಯಗಳಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಎಮ್ ಆರ್ ಮುರಳಿ ವಿರುದ್ಧ 14ಮತಗಳ ಅಂತರದಿಂದ ಗೆಲುವಿನ  ನಗೆ  ಬೀರಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ನಿರುಪಮಾ 510 ಮತ ಗಳಿಸಿದರೆ, ಜೆಡಿಎಸ್ ಅಭ್ಯರ್ಥಿ ಎಮ್ ಆರ್ ಮುರಳಿ 496 ಮತ ಗಳಿಸಿದ್ದಾರೆ. ಬಿಜೆಪಿ ಸ್ಪರ್ಧೆಯಲ್ಲಿಯೇ ಇರಲಿಲ್ಲ.

ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ (Jagan mohan reddy )ಕೊಲೆಯಾದ ಕಾರಣದಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಪಕ್ಷ ಜಗನ್ ಮೋಹನ್ ರೆಡ್ಡಿ ಪತ್ನಿ ನಿರುಪಮಾರನ್ನು ಕಣಕ್ಕೆ ಇಳಿಸಿತ್ತು.

LEAVE A REPLY

Please enter your comment!
Please enter your name here