ಅಂಗಾಂಗ ಕಸಿಗೆ ದೇಶಾದ್ಯಂತ ನಿಯಮಗಳು ಬದಲಾವಣೆ – ಹೊಸ ನಿಯಮದಲ್ಲಿ ಏನಿದೆ..?

ಅಂಗಾಂಗ ದಾನ ಸಂಬಂಧಿಸಿದ ನಿಯಮಗಳಲ್ಲಿ ಕೇಂದ್ರ ಸರ್ಕಾರ (Union Health Ministry) ಮಹತ್ವದ ಬದಲಾವಣೆ ಮಾಡಿದೆ.
ಅಂಗಾಂಗ ದಾನ ಮತ್ತು ಕಸಿ ಚಿಕಿತ್ಸೆಗಾಗಿ (Organ Donation And Transplant Rules) ಈ ಹಿಂದೆ ಇದ್ದ ಕೆಲವು ನಿಯಮಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಸಡಿಲಗೊಳಿಸಿದೆ.
ಬದಲಾದ ನಿಯಮಗಳು:
1. ಅಂಗಾಂಗ ಕಸಿ ಚಿಕಿತ್ಸೆ ಅಗತ್ಯ ಇರುವವರು ತಮ್ಮ ತವರು ರಾಜ್ಯ ಮಾತ್ರವಲ್ಲದೇ ಯಾವ ರಾಜ್ಯದಲ್ಲಿ ಬೇಕಾದರೂ ನೋಂದಣಿ ಮಾಡಿಕೊಳ್ಳಬಹುದು. 
ಇದುವರೆಗೆ ಅಂಗಾಂಗ ಕಸಿಗಾಗಿ ರೋಗಿ ತನ್ನ ತವರು ರಾಜ್ಯದಲ್ಲಿ ಮಾತ್ರವೇ ನೋಂದಣಿ ಮಾಡಿಕೊಳ್ಳಲು ಅನುಮತಿ ಇತ್ತು.
ಅಂಗಾಂಗ ಕಸಿ ಚಿಕಿತ್ಸೆಗಾಗಿ ತವರು ರಾಜ್ಯದಲ್ಲಿ ವಾಸವಾಗಿದ್ದೇವೆ ಎಂಬ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿತ್ತು. ಗುಜರಾತ್​ ಸರ್ಕಾರದ ಈ ನಿಯಮವನ್ನು ಕಳೆದ ವರ್ಷ ಗುಜರಾತ್​ ಹೈಕೋರ್ಟ್​ ರದ್ದುಗೊಳಿಸಿತ್ತು.
2. ಅಂಗಾಂಗ ಕಸಿ ಬಯಸಿ ನೋಂದಣಿ ಮಾಡಿಕೊಂಡ ಬಳಿಕ ರಾಷ್ಟ್ರೀಯ ಅಂಗಾಂಗ ಕೃಷಿ ಸಂಘದಿಂದ (NOTTO)ಯಿಂದ ವಿಶಿಷ್ಟ ಗುರುತಿನ ಚೀಟಿಯನ್ನು (ID)ಯನ್ನು ನೀಡಲಾಗುತ್ತದೆ.
3. ಈ ಗುರುತಿನ ಚೀಟಿಯನ್ನೇ ಬೇರೆ ರಾಜ್ಯಗಳಲ್ಲಿರುವ ಯಾವುದೇ ಆಸ್ಪತ್ರೆಯಲ್ಲೂ ಬಳಸಬಹುದು.
4. ಅಂಗಾಂಗ ಕಸಿಗಾಗಿ ದೇಶಾದ್ಯಂತ ಒಂದೇ ಕಾಯುವಿಕೆ ಪಟ್ಟಿ ಇರಲಿದೆ.
5. ಅಂಗಾಂಗ ಕಸಿ ನೋಂದಣಿಗಾಗಿ ಇನ್ಮುಂದೆ ಶುಲ್ಕ ಪಾವತಿಸಬೇಕಿಲ್ಲ. ಇಲ್ಲಿಯವರೆಗೆ ಮಹಾರಾಷ್ಟ್ರ, ಗುಜರಾತ್​, ಕೇರಳ, ತೆಲಂಗಾಣದಲ್ಲಿ ಅಂಗಾಂಗ ಕಸಿ ನೋಂದಣಿಗೆ 5 ಸಾವಿರ ರೂಪಾಯಿಗಳಿಂದ 10 ಸಾವಿರ ರೂಪಾಯಿವರೆಗೆ ನೋಂದಣಿ ಶುಲ್ಕ ಪಾವತಿಸಬೇಕಿತ್ತು.
6. ಅಂಗಾಂಗ ಕಸಿಗೆ ಇನ್ಮುಂದೆ ವಯಸ್ಸಿನ ಮಿತಿ ಇರಲ್ಲ. 65 ವರ್ಷ ಮೇಲ್ಪಟ್ಟವರು ಕೂಡಾ ಮೃತ ವ್ಯಕ್ತಿ ಮಾಡುವ ಅಂಗಾಂಗ ದಾನದಿಂದ ಅಂಗಾಂಗ ಕಸಿ ಮಾಡಿಕೊಳ್ಳಬಹುದು. ಇಲ್ಲಿಯವರೆಗೆ 65 ವರ್ಷ ಮೇಲ್ಪಟ್ಟವರಿಗೆ ಅಂಗಾಂಗ ಕಸಿಗೆ ನೋಂದಣಿ ಮಾಡಿಕೊಳ್ಳಬಹುದು. ಆದರೆ ಅಂಗಾಂಗ ಕಸಿಯಲ್ಲಿ ಅಗತ್ಯ ಯುವ ರೋಗಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
2013ರಲ್ಲಿ ಮೃತ ವ್ಯಕ್ತಿಗಳ ಅಂಗಾಂಗ ದಾನದಿಂದ 837 ಮಂದಿಗೆ ಅಂಗಾಂಗ ಕಸಿ ಮಾಡಲಾಗಿತ್ತು. 2022ರಲ್ಲಿ ಈ ಪ್ರಮಾಣ 2,765ಕ್ಕೆ ಏರಿಕೆ ಆಗಿತ್ತು.
2022ರಲ್ಲಿ ದೇಶದಲ್ಲಿ ಅಂಗಾಂಗ ಕಸಿ ಚಿಕಿತ್ಸೆಗೆ ಶೇಕಡಾ 17ರಷ್ಟು ಪ್ರಕರಣಗಳಲ್ಲಿ ಮೃತ ವ್ಯಕ್ತಿಯ ಅಂಗಾಂಗ ದಾನವನ್ನೇ ಬಳಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here