ಶಿವರಾತ್ರಿಯಂದು ಆಡಳಿತರೂಢ ಬಿಜೆಪಿಗೆ ಕಾಂಗ್ರೆಸ್ ಆಘಾತ ನೀಡಿದೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡನೆ ವೇಳೆ ಕಿವಿ ಮೇಲೆ ಚೆಂಡು ಹೂ ಇಟ್ಟುಕೊಂಡು ಅಭಿಯಾನ ಮಾಡಿದ್ದ ಕಾಂಗ್ರೆಸ್ ಈಗ ಹೊಸ ಅಭಿಯಾನ ಶುರು ಮಾಡಿದೆ.
ಕಾಂಪೌಂಡ್ ಗೋಡೆಗಳು, ಮನೆಗಳ ಗೋಡೆಗಳ ಮೇಲೆ ಬಿಜೆಪಿ ಕಾರ್ಯಕರ್ತರು ಅಂಟಿಸಿರುವ ಬಿಜೆಪಿಯೇ ಭರವಸೆ ಪೋಸ್ಟರ್ಗಳ ಮೇಲೆ ಕಾಂಗ್ರೆಸ್ ಕಿವಿ ಮೇಲೆ ಹೂವ ಎಂಬ ಭಿತ್ತಿಪತ್ರವನ್ನು ಅಂಟಿಸಿದೆ.
ಭರವಸೆ, ಭರವಸೆ, ಬುರುಡೆ ಭರವಸೆ – ಸಾಕು, ಕಿವಿ ಮೇಲೆ ಹೂವ ಎಂಬ ಪತ್ರಗಳನ್ನು ಬಿಜೆಪಿ ಪೋಸ್ಟರ್ಗಳ ಮೇಲೆ ಅಂಟಿಸಿದೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ 224 ವಿಧಾನಸಭಾ ಕ್ಷೇತ್ರಗಳಲ್ಲೂ ಗೋಡೆಗಳ ಮೇಲೆ ತನ್ನ ಸರ್ಕಾರ ಸಾಧನೆಯನ್ನು ಬಿಂಬಿಸುವ ಮಾಹಿತಿಯುಳ್ಳ ಮತ್ತು ಬಿಜೆಪಿಯೇ ಭರವಸೆ ಎಂಬ ಒಕ್ಕಣೆಯುಳ್ಳ ಪೋಸ್ಟರ್ಗಳನ್ನು ಅಂಟಿಸಿತ್ತು.
ಅದಕ್ಕೆ ಕಾಂಗ್ರೆಸ್ ಈಗ ಪ್ರತಿ ಅಭಿಯಾನ ಕೈಗೊಂಡಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಶೇಕಡಾ 40ರಷ್ಟು ಕಮಿಷನ್ ಹಗರಣ ವಿರುದ್ಧ ಕಾಂಗ್ರೆಸ್ PAYCM ಹೆಸರಲ್ಲಿ ಮುಖ್ಯಮಂತ್ರಿ ಅಧಿಕೃತ ನಿವಾಸದ ಕಾಂಪೌಂಡ್ ಸೇರಿದಂತೆ ಹಲವು ಕಡೆಗಳಲ್ಲಿ ಪೋಸ್ಟರ್ನ್ನು ಅಂಟಿಸಿತ್ತು.
ಕಾಂಗ್ರೆಸ್ನ PAYCM ಅಭಿಯಾನ ಬಿಜೆಪಿಗೆ ದೊಡ್ಡ ಮುಜುಗರ ಉಂಟು ಮಾಡಿತ್ತು.
ADVERTISEMENT
ADVERTISEMENT