ADVERTISEMENT
ಬಿಜೆಪಿಯಿಂದ ಈ ಬಾರಿ ಚುನಾವಣೆಗೆ ನಿಲ್ಲಲು ಬಯಸಿರುವ ಲೋಕಾಯುಕ್ತ ಡಿವೈಎಸ್ಪಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರಲ್ಲಿ ಲೋಕಾಯುಕ್ತ ಡಿವೈಎಸ್ಪಿ ಆಗಿರುವ ಓ ಬಿ ಕಲ್ಲೇಶಪ್ಪ (Karnataka Lokayukta DySP O B Kalleshappa) ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಆಪ್ತ ಅಧಿಕಾರಿಗಾಗಿ ನಿಯಮದಲ್ಲೇ ಸಡಿಲಿಕೆ:
ಸರ್ಕಾರಿ ಹುದ್ದೆಯಲ್ಲಿರುವವರು ಚುನಾವಣೆಗೆ ನಿಲ್ಲುವ ಮೊದಲು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜೀನಾಮೆಗೆ ಅಂಗೀಕಾರ ಪಡೆದುಕೊಳ್ಳುವುದು ಕಡ್ಡಾಯ.
ಸ್ವಯಂ ನಿವೃತ್ತಿ (VRS) ಹೊಂದುವ ಬಗ್ಗೆ ಕಳೆದ ತಿಂಗಳು ಅಂದರೆ ಜನವರಿ 12ರಂದು ಲೋಕಾಯುಕ್ತ ಡಿವೈಎಸ್ಪಿ ಓ ಬಿ ಕಲ್ಲೇಶಪ್ಪ ಅವರು ಅರ್ಜಿ ಸಲ್ಲಿಸಿದ್ದರು.
ಈ ಮನವಿಯನ್ನು ಮುಂದಿನ ಕ್ರಮಕ್ಕಾಗಿ ಜನವರಿ 21ರಂದು ಕರ್ನಾಟಕ ಲೋಕಾಯುಕ್ತದ ನಿಬಂಧಕರು ಕಳುಹಿಸಿದ್ದರು.
ಡಿವೈಎಸ್ಪಿ ಕಲ್ಲೇಶಪ್ಪ ಅವರ ವಿರುದ್ಧ ಯಾವುದೇ ಇಲಾಖಾ ವಿಚಾರಣೆ, ನ್ಯಾಯಾಂಗ ಪ್ರಕರಣ, ಕ್ರಿಮಿನಲ್ ಪ್ರಕರಣ ಮತ್ತು ಶಿಸ್ತು ಕ್ರಮ ಬಾಕಿ ಇರುವುದಿಲ್ಲ.
ADVERTISEMENT
ಸರ್ಕಾರದಿಂದಲೇ ನಿರ್ಧಾರ:
ಓ ಬಿ ಕಲ್ಲೇಶಪ್ಪ ಅವರು ಎ ವೃಂದದ ಅಧಿಕಾರಿ ಆಗಿರುವ ಕಾರಣ ಇವರ ಸ್ವಯಂ ನಿವೃತ್ತಿಯನ್ನು ಅಂಗೀಕರಿಸಲು ಸರ್ಕಾರವೇ ಸಕ್ಷಮ ಪ್ರಾಧಿಕಾರವಾಗಿರುತ್ತದೆ.
ಮೂರು ತಿಂಗಳ ಮೊದಲೇ ಅರ್ಜಿ ಸಲ್ಲಿಕೆ ಕಡ್ಡಾಯ:
ಸ್ವಯಂ ನಿವೃತ್ತಿ ಬಯಸುವವರು ಸರ್ಕಾರಿ ನೌಕರರು ನಿವೃತ್ತಿಗೂ ಮೂರು ತಿಂಗಳು ಮೊದಲು ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾಗುತ್ತದೆ.
ಷರತ್ತು ಸಡಿಲಿಕೆ:
ಆದರೆ ಓ ಬಿ ಕಲ್ಲೇಶಪ್ಪ ಅವರ ಸ್ವಯಂ ನಿವೃತ್ತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿದೆ.
ವಿಶೇಷ ಪ್ರಕರಣವೆಂದು ಪರಿಗಣಿಸಿ ಮೂರು ತಿಂಗಳು ಮೊದಲೇ ಅಂದರೆ ಫೆಬ್ರವರಿ 28ರಿಂದಲೇ ಅನ್ವಯವಾಗುವಂತೆ ಸ್ವಯಂ ನಿವೃತ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕ ನಾಗರಿಕ ಸೇವಾ ನಿಯಮದಲ್ಲಿ ಸಡಿಲಿಕೆಯನ್ನು ಮಾಡಿ ಡಿವೈಎಸ್ಪಿ ಕಲ್ಲೇಶಪ್ಪ ಅವರ ಸ್ವಯಂ ನಿವೃತ್ತಿಯನ್ನು ಅಂಗೀಕರಿಸಲಾಗಿದೆ.
ಜಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ:
ಡಿವೈಎಸ್ಪಿ ಕಲ್ಲೇಶಪ್ಪ ಅವರು ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ.
ಹಾಲಿ ಶಾಸಕ ಎಸ್ ವಿ ರಾಮಚಂದ್ರಪ್ಪ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ ಹೊಸ ಮುಖವನ್ನು ಕಣಕ್ಕಿಳಿಸಬಹುದು ಎಂಬ ಹಿನ್ನೆಲೆಯಲ್ಲಿ ಕಲ್ಲೇಶಪ್ಪ ಅವರೂ ಟಿಕೆಟ್ಗಾಗಿ ಲಾಬಿ ನಡೆಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಆಪ್ತ:
ಲೋಕಾಯುಕ್ತ ಡಿವೈಎಸ್ಪಿ ಕಲ್ಲೇಶಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪ್ತ. ಇವರು ಶಿಗ್ಗಾಂವಿ ಅಂದರೆ ಬೊಮ್ಮಾಯಿ ಅವರ ವಿಧಾನಸಭಾ ಕ್ಷೇತ್ರದಲ್ಲಿ ಡಿವೈಎಸ್ಪಿ ಆಗಿದ್ದರು.
ಕಲ್ಲೇಶಪ್ಪ ಪತ್ನಿಯೂ ಬಿಜೆಪಿ ನಾಯಕಿ: