ಪ್ರಧಾನಿ ಮೋದಿ ಸರ್ಕಾರ ಹಲವು ಎಲೆಕ್ಟ್ರಾನಿನ್ ಉತ್ಪನ್ನಗಳ ಮೇಲಿನ ಸುಂಕವನ್ನು ಇಳಿಸಿದೆ. ಸ್ವದೇಶದಲ್ಲೇ ತಯಾರಿಸಲಾಗುವ ಟಿವಿ ಸೆಟ್ಗಳಿಗೆ ಬಳಸಲಾಗುವ ಸೆಲ್ ಗಳ ಮೇಲಿನ ಆಮದು ಸುಂಕವನ್ನು ಶೇಕಡಾ 5ರಿಂದ ಶೇಕಡಾ 2.5ಕ್ಕೆ ಇಳಿಸಲಾಗಿದೆ.
ಅರ್ಧದಷ್ಟು ಸುಂಕ ಇಳಿಕೆಯಿಂದ ಟಿವಿ ಸೆಟ್ಗಳ ಬೆಲೆ 3 ಸಾವಿರ ರೂಪಾಯಿ ಕಡಿಮೆ ಆಗಲಿದೆ.
ಟಿವಿಗಳ ನಿರ್ಮಾಣಕ್ಕೆ ಬಳಸಲಾಗುವ ಪ್ಯಾನೆಲ್ಗಳ ವೆಚ್ಚವೇ ಟಿವಿ ನಿರ್ಮಾಣದ ಶೇಕಡಾ 60-70ರಷ್ಟು ವೆಚ್ಚವನ್ನು ಒಳಗೊಂಡಿದೆ.
ಆಮದು ಸುಂಕ ಕಡಿತದಿಂದಾಗಿ ಸ್ವದೇಶದಲ್ಲೇ ಟಿವಿ ಉತ್ಪಾದಿಸುವ ಉದ್ಯಮಕ್ಕೆ ಉತ್ತೇಜನ ಸಿಗಲಿದೆ.