ವಿದೇಶಕ್ಕೆ ಪ್ರವಾಸ ಹೋಗುವ ಭಾರತೀಯರ ಆಸೆಗೆ ಪ್ರಧಾನಿ ಮೋದಿ ಸರ್ಕಾರ ಆಘಾತ ನೀಡಿದೆ. ವಿದೇಶ ಪ್ರವಾಸದ ಮೇಲೆ ಹಾಕಲಾಗುವ ತೆರಿಗೆಯ ಮೊತ್ತವನ್ನು ಬರೋಬ್ಬರೀ ಶೇಕಡಾ 5ರಿಂದ ಶೇಕಡಾ 20ಕ್ಕೆ ಏರಿಕೆ ಮಾಡಿದೆ.
ಅಂದರೆ ವಿದೇಶಕ್ಕೆ ಹೋಗುವ ಭಾರತದ ಪ್ರವಾಸಿಗರು ಇನ್ಮುಂದೆ ಶೇಕಡಾ 15ರಷ್ಟು ತೆರಿಗೆಯನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.
ವಿದೇಶಕ್ಕೆ ಹೋಗುವ ಟೂರ್ ಪ್ಯಾಕೇಜ್ ದುಬಾರಿಯಾಗಲಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಕ್ಕೆ ಹೊಡೆತ ಬೀಳಲಿದೆ ಎನ್ನುವುದು ಉದ್ಯಮದವರ ಮಾತು.