Union Budget : BREAKING: ಆಹಾರ ಭದ್ರತೆ ಮೇಲಿನ ಅನುದಾನ ಮತ್ತಷ್ಟು ಇಳಿಕೆ

ಆಹಾರ ಭದ್ರತೆ ಮೇಲಿನ ಕೇಂದ್ರ ಸರ್ಕಾರದ ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಡಿತ ಮಾಡಿದೆ.

ಇವತ್ತು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಸರ್ಕಾರದ ಬಜೆಟ್​ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಆಹಾರ ಭದ್ರತೆಗಾಗಿ ಬಜೆಟ್​ನಲ್ಲಿ 2 ಲಕ್ಷ ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.

ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಯೋಜನೆಗೆ ಈ ಬಜೆಟ್​ನಲ್ಲಿ 2 ಲಕ್ಷ ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ.

ಈ ವರ್ಷದ ಜನವರಿಯಿಂದ ಒಂದು ವರ್ಷದ ಮಟ್ಟಿಗೆ ಉಚಿತ ಪಡಿತರ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಹೇಳಿದ್ದಾರೆ.

ಕಳೆದ ಬಜೆಟ್​ನಲ್ಲಿ ಆಹಾರ ಭದ್ರತೆಗಾಗಿ ಮೋದಿ ಸರ್ಕಾರ 2 ಲಕ್ಷದ 70 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು.

 

LEAVE A REPLY

Please enter your comment!
Please enter your name here