ಪ್ರಧಾನಿ ಕಾಳಜಿ ನಿಧಿ ಸರ್ಕಾರದಲ್ಲ ಮತ್ತು ಪ್ರಧಾನಿ ಕಾಳಜಿ ನಿಧಿ ಮೇಲೆ ಸರ್ಕಾರಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ನಿಯಂತ್ರಣ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೆಹಲಿ ಹೈಕೋರ್ಟ್ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದೆ.
ಪ್ರಧಾನಿ ಕಾಳಜಿ ನಿಧಿ ಸರ್ಕಾರದಲ್ಲವಾಗಿರುವ ಕಾರಣ, ಸಾರ್ವಜನಿಕ ಪ್ರಾಧಿಕಾರವಲ್ಲವಾದ ಕಾರಣ ಈ ನಿಧಿ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರಲ್ಲ ಎಂದು ಮೋದಿ ಸರ್ಕಾರ ದೆಹಲಿ ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ.
ಪ್ರಧಾನಿ ಕಾಳಜಿ ಟ್ರಸ್ಟ್ನ ಮಾಲೀಕತ್ವವನ್ನು, ನಿಯಂತ್ರಣವನ್ನು ಅಥವಾ ನಿಧಿಗೆ ಸರ್ಕಾರದಿಂದ ಧನ ಸಹಾಯ ಆಗುತ್ತಿಲ್ಲವಾದ ಕಾರಣ ಇದು ಸಾರ್ವಜನಿಕ ಪ್ರಾಧಿಕಾರವಲ್ಲ. ಟ್ರಸ್ಟ್ನ ಕಾರ್ಯಚಟುವಟಿಕೆ ಮೇಲೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವಾಗಲೀ ಪರೋಕ್ಷ ಅಥವಾ ನೇರವಾಗಿ ಯಾವುದೇ ನಿಯಂತ್ರಣ ಹೊಂದಿಲ್ಲ ಎಂದು ಮೋದಿ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ.
ನಿಧಿಗೆ ಸ್ವಯಂಪ್ರೇರಿತವಾಗಿ ದೇಣಿಗೆಯನ್ನು ನೀಡಲಾಗುತ್ತಿದೆಯೇ ಹೊರತು ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳಿಗೆ ದೇಣಿಗೆ ನೀಡಲಾಗುತ್ತಿಲ್ಲ. ಕಾಳಜಿ ನಿಧಿಗೆ ನೀಡಲಾಗುವ ದೇಣಿಗೆಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆಯಾದರೂ ಅದರ ಅರ್ಥ ನಿಧಿ ಆರ್ಟಿಐ ವ್ಯಾಪ್ತಿಗೆ ಬರುತ್ತದೆ ಎಂದಲ್ಲ ಎಂದು ಮೋದಿ ಸರ್ಕಾರ ಹೈಕೋರ್ಟ್ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದೆ.
ADVERTISEMENT
ADVERTISEMENT