ಇವತ್ತು ಮಂಡನೆಯಾದ ಪ್ರಧಾನಿ ಮೋದಿ ಸರ್ಕಾರದ ಬಜೆಟ್ನ ಪ್ರಮುಖ ಘೋಷಣೆಗಳು ಹೀಗಿವೆ:
ಬಯೋ ಗ್ಯಾಸ್ ಮೇಲೆ ಶೇಕಡಾ 5ರಷ್ಟು ಸೆಸ್ (ಉಪ ತೆರಿಗೆ ಅಥವಾ ಉಪ ಸುಂಕ)
ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಬಳಕೆಯಲ್ಲಿರುವ 15 ವರ್ಷದಷ್ಟು ಹಳೆಯ ವಾಹನಗಳು, ಅಂಬ್ಯುಲೆನ್ಸ್ಗಳು ಗುಜರಿಗೆ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ – 2 ಲಕ್ಷ ಕೋಟಿ ರೂಪಾಯಿ
ಎಲ್ಲ ಹಣಕಾಸು ವರ್ಗಾವಣೆಗಳಿಗೆ ಪ್ಯಾನ್ ಕಾರ್ಡ್ನ್ನು ಸಾಮಾನ್ಯ ಗುರುತಿನ ಚೀಟಿಯಾಗಿ ಪರಿಗಣಿಸಲಾಗುತ್ತದೆ.
ರೈಲ್ವೆ ಸಚಿವಾಲಯ – 2 ಲಕ್ಷದ 40 ಸಾವಿರ ಕೋಟಿ ರೂಪಾಯಿ
ಇ ಕೋರ್ಟ್ ಗಳಿಗಾಗಿ 7 ಸಾವಿರ ಕೋಟಿ ರೂಪಾಯಿ
5ಜಿ ಅಪ್ಲಿಕೇಷನ್ಗಳ ಅಭಿವೃದ್ಧಿಗಾಗಿ 100 ಪ್ರಯೋಗಾಲಯಗಳ ಸ್ಥಾಪನೆ
ಜೈಲಿನಲ್ಲಿ ಬಂಧಿ ಆಗಿರುವ ಬಡ ಕೈದಿಗಳ ಬಿಡುಗಡೆಗೆ ಅವರ ಪಾವತಿಸಬೇಕಾಗಿರುವ ದಂಡದ ಮೊತ್ತದ ಪಾವತಿಗಾಗಿ ಧನ ಸಹಾಯ
ಕೃಷಿ ಸಾಲ ವಿತರಣೆ ಗುರಿ : 20 ಲಕ್ಷ ಕೋಟಿ ರೂಪಾಯಿ
ತೋಟಗಾರಿಕೆ ಕ್ಷೇತ್ರಕ್ಕಾಗಿ 2,200 ಕೋಟಿ ರೂಪಾಯಿ
157 ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡಂತೆ 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ
ವಿದ್ಯುತ್ ವಿತರಣೆ ಯೋಜನೆಗಾಗಿ 35 ಸಾವಿರ ಕೋಟಿ ರೂಪಾಯಿ