ಮಹಿಳೆಯರಲ್ಲಿ ಹಣ ಉಳಿತಾಯ ಹೆಚ್ಚಿಸುವ ಸಲುವಾಗಿ ಪ್ರಧಾನಿ ಮೋದಿ ಸರ್ಕಾರ ಮಹಿಳಾ ಸಮ್ಮಾನ್ ಉಳಿತಾಯ ಪತ್ರವನ್ನು ಘೋಷಿಸಿದೆ.
ಈ ಉಳಿತಾಯ ಪತ್ರದ ಮೂಲಕ 2 ವರ್ಷದ ಮಟ್ಟಿಗೆ ಮಹಿಳೆಯರು 2 ಲಕ್ಷ ರೂಪಾಯಿವರೆಗೆ ಉಳಿತಾಯ ಠೇವಣಿ ಇಡಬಹುದಾಗಿದೆ.
ಆದರೆ ಕೇವಲ 1 ಬಾರಿಯಷ್ಟೇ ಈ ಉಳಿತಾಯ ಪತ್ರ ಪಡೆಯಲು ಅವಕಾಶ ಸಿಗಲಿದೆ.
ಈ ಉಳಿತಾಯ ಪತ್ರದಲ್ಲಿ ದುಡ್ಡಿಡುವ ಮಹಿಳೆಯರಿಗೆ ಶೇಕಡಾ 7.5ರಷ್ಟು ಉಳಿತಾಯ ಬಡ್ಡಿ ಸಿಗಲಿದೆ.
ಹಿರಿಯ ನಾಗರಿಕರಿಗೆ ಉಳಿತಾಯ ಠೇವಣಿ ಮೊತ್ತವನ್ನು 15 ಲಕ್ಷದಿಂದ 30 ಲಕ್ಷ ರೂಪಾಯಿ ಏರಿಕೆ ಮಾಡಲಾಗಿದೆ.
ADVERTISEMENT
ADVERTISEMENT