ಆದಾಯ ತೆರಿಗೆ ಮಿತಿಯಲ್ಲಿ ಪ್ರಧಾನಿ ಮೋದಿ ಸರ್ಕಾರ ಬದಲಾವಣೆ ಮಾಡಲಾಗಿದೆ. ದೇಶದಲ್ಲಿ ಹೊಸ ಆದಾಯ ತೆರಿಗೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆ.
ಈಗಿರುವ 5 ಲಕ್ಷ ರೂಪಾಯಿಗಳಿಂದ 7 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಆದರೆ ಆದಾಯ ತೆರಿಗೆ ಮಿತಿಯನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಕೆಲವು ಷರತ್ತುಗಳನ್ನೂ ವಿಧಿಸಿದ್ದಾರೆ. ಈ ಮಿತಿಗಳ ಬದಲಾವಣೆ ನೋಡಿದರೆ ಆದಾಯ ತೆರಿಗೆ ಬದಲಾವಣೆಯಿಂದ ಅಷ್ಟೊಂದು ದೊಡ್ಡ ಲಾಭ ಸಿಕ್ಕಂತೆ ಕಾಣುತ್ತಿಲ್ಲ.
3 ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆ ಪಾವತಿಸುವಂತಿಲ್ಲ. ಈ ಮಿತಿ ಈಗ ಎರಡೂವರೆ ಲಕ್ಷದಷ್ಟಿದೆ.
ಈ ಹಿಂದೆ 5 ಲಕ್ಷ ರೂಪಾಯಿವರೆಗೆ ಶೇಕಡಾ 5ರಷ್ಟು ಆದಾಯ ತೆರಿಗೆ ಪಾವತಿಸಬೇಕಾಗಿತ್ತು.
3 ಲಕ್ಷ ರೂಪಾಯಿಯಿಂದ 6 ಲಕ್ಷ ರೂಪಾಯಿವರೆಗೆ : ಶೇಕಡಾ 5ರಷ್ಟು ತೆರಿಗೆ
ಈ ಹಿಂದೆ 5 ಲಕ್ಷದಿಂದ ಏಳೂವರೆ ಲಕ್ಷ ರೂಪಾಯಿವರೆಗೆ ಶೇಕಡಾ 10ರಷ್ಟು ಆದಾಯ ತೆರಿಗೆ ಕಟ್ಟಬೇಕಿತ್ತು.
6 ಲಕ್ಷದಿಂದ 9 ಲಕ್ಷ ರೂಪಾಯಿವರೆಗೆ – ಶೇಕಡಾ 10ರಷ್ಟು
ಈ ಹಿಂದೆ ಏಳೂವರೆ ಲಕ್ಷದಿಂದ 10 ಲಕ್ಷ ರೂಪಾಯಿವರೆಗೆ ಶೇಕಡಾ 15ರಷ್ಟು ಆದಾಯ ತೆರಿಗೆ ಕಟ್ಟಬೇಕಿತ್ತು.
9 ಲಕ್ಷದಿಂದ 12 ಲಕ್ಷ ರೂಪಾಯಿವರೆಗೆ – ಶೇಕಡಾ 15ರಷ್ಟು
ಈ ಹಿಂದೆ ಶೇಕಡಾ 10 ಲಕ್ಷದಿಂದ 12.5 ಲಕ್ಷ ರೂಪಾಯಿವರೆಗೆ ಶೇಕಡಾ 20ರಷ್ಟು ಆದಾಯ ತೆರಿಗೆ ಕಟ್ಟಬೇಕಿತ್ತು.
12 ರಿಂದ 15 ಲಕ್ಷ ರೂಪಾಯಿವರೆಗೆ – ಶೇಕಡಾ 20ರಷ್ಟು
ಈ ಹಿಂದೆ 12.5 ಲಕ್ಷದಿಂದ 15 ಲಕ್ಷ ರೂಪಾಯಿವರೆಗೆ ಶೇಕಡಾ 25ರಷ್ಟು ಆದಾಯ ತೆರಿಗೆ ಕಟ್ಟಬೇಕಿತ್ತು
15 ಲಕ್ಷ ರೂಪಾಯಿಂದ ಮೇಲ್ಪಟ್ಟು – ಶೇಕಡಾ 30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ಈ ಹಿಂದೆ ಕೂಡಾ 15 ಲಕ್ಷ ರೂಪಾಯಿ ಮೇಲ್ಪಟ್ಟ ಆದಾಯಕ್ಕೆ ಶೇಕಡಾ 30ರಷ್ಟು ತೆರಿಗೆಯನ್ನೇ ಕಟ್ಟಬೇಕಿತ್ತು.