ಉಡುಪಿ ಜಿಲ್ಲೆ: ಪೆಟ್ರೋಲಿಯಂ ಸಂಗ್ರಹಾಗಾರಕ್ಕೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಪ್ರಕಟ

ಉಡುಪಿ ಜಿಲ್ಲೆಯಲ್ಲಿ ಎರಡನೇ ಹಂತದ ಪೆಟ್ರೋಲಿಯಂ ಸಂಗ್ರಹಾಗಾರ ಸ್ಥಾಪನೆಗೆ ಭೂ ಸ್ವಾಧೀನ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಪೆಟ್ರೋಲಿಯಂ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ISRPL Ltd ಎರಡನೇ ಹಂತದ ಸಂಗ್ರಹಾಗಾರಕ್ಕಾಗಿ 215 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ.

215 ಎಕರೆ ಭೂಮಿಯಲ್ಲಿ 11 ಎಕರೆ 20 ಸೆಂಟ್ಸ್​​ ಸರ್ಕಾರಿ ಭೂಮಿಯೂ ಒಳಗೊಂಡಿದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾದೂರಿನಲ್ಲಿ 193 ಎಕರೆ 26 ಸೆಂಟ್ಸ್​ ಖಾಸಗಿಯವರಿಗೆ ಸೇರಿದ ಭೂಮಿ ಮತ್ತು ಕಳತ್ತೂರಿನಲ್ಲಿ 10 ಎಕರೆ 33 ಸೆಂಟ್ಸ್​ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ.

ಕರ್ನಾಟಕ ಪ್ರದೇಶ ಕೈಗಾರಿಕಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಅಧಿಸೂಚನೆಯನ್ನು ಹೊರಡಿಸಿದೆ.

LEAVE A REPLY

Please enter your comment!
Please enter your name here