ಈಶಾನ್ಯ ರಾಜ್ಯ ತ್ರಿಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ ಎಂದು ಪ್ರಮುಖ ಚುನಾವಣಾ ವಿಶ್ಲೇಷಕ ಶಶಿ ಎಸ್ ಸಿಂಗ್ ಅವರು ಅಂದಾಜು ಮಾಡಿದ್ದಾರೆ.
ತ್ರಿಪುರ, ಮೇಘಾಲಯ, ನಾಗಲ್ಯಾಂಡ್ಗೆ ನಡೆದಿರುವ ವಿಧಾನಸಭಾ ಚುನಾವಣೆಯ ಫಲಿತಾಂಶ ಮಾರ್ಚ್ 2ರಂದು ಪ್ರಕಟವಾಗಲಿದೆ.
ತ್ರಿಪುರದಲ್ಲಿ 60 ವಿಧಾನಸಭಾ ಕ್ಷೇತ್ರಗಳಿವೆ. ಸರ್ಕಾರಕ್ಕೆ ರಚನೆಗೆ ಬೇಕಾದ ಬಹುಮತ 31 ಶಾಸಕರ ಬಲ.
ಶಶಿ ಎಸ್ ಸಿಂಗ್ ಅವರ ಪ್ರಕಾರ
ಎಡಪಕ್ಷಗಳು – 14
ಬಿಜೆಪಿ ಮೈತ್ರಿಕೂಟ – 12
ತಿಪ್ರಾ – 10
ಕಾಂಗ್ರೆಸ್ – 3
ಸ್ವತಂತ್ರರು – 2 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
50-50 ಎಂದು ಕರೆಯಬಹುದಾದ ಕ್ಷೇತ್ರಗಳು: 19 ಕ್ಷೇತ್ರಗಳು ಎಂದು ಲೆಕ್ಕಾಚಾರ ಹಾಕಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರದಲ್ಲಿ 32 ಸ್ಥಾನಗಳನ್ನು ಗೆದ್ದು ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೇರುವ ಮೂಲಕ ಮೊದಲ ಬಾರಿಗೆ ಎಡಪಕ್ಷಗಳ ಪಾರುಪತ್ಯವನ್ನು ಮುರಿದಿತ್ತು.
ಈ ಬಾರಿ ತ್ರಿಪುರದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಚುನಾವಣಾ ಮೈತ್ರಿ ಮಾಡಿಕೊಂಡಿವೆ. ತ್ರಿಪುರ ರಾಜವಂಶಸ್ಥ ಪ್ರದ್ಯೋತ್ ದೆಬ್ ಬರ್ಮಾ ಅವರ ಹೊಸ ಪಕ್ಷ ತ್ರಿಪುರ ಆದಿವಾಸಿ ಪ್ರಗತಿಪರ ಮೈತ್ರಿಕೂಟ (TIPRA) ರಾಜ್ಯದ ಚುನಾವಣಾ ಫಲಿತಾಂಶವನ್ನೇ ಬದಲಿಸಿದೆ.
ADVERTISEMENT
ADVERTISEMENT