ದಕ್ಷಿಣ ಕನ್ನಡ, ಉಡುಪಿಗೆ ಹೊರಗಿನವರೇ ಜಿಲ್ಲಾ ಉಸ್ತುವಾರಿ ಸಚಿವರು

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರನ್ನು ನೇಮಿಸಲಾಗಿದೆ.
ದಿನೇಶ್​ ಗುಂಡೂರಾವ್​​ ಬೆಂಗಳೂರು ನಗರದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರನ್ನು ನೇಮಿಸಲಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್​ ಮಂಗಳೂರು ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ತು. ಹಿರಿತನ ಪರಿಗಣಿಸಿ ಯು ಟಿ ಖಾದರ್​ ಅವರನ್ನು ವಿಧಾನಸಭೆಯ ಸ್ಪೀಕರ್​ ಮಾಡಲಾಗಿದೆ. ಮೊದಲ ಬಾರಿಗೆ ಗೆದ್ದಿರುವ ಕಾರಣ ಪುತ್ತೂರು ಶಾಸಕ ಅಶೋಕ್​ ರೈಗೆ ಸಚಿವ ಸ್ಥಾನ ಸಿಕ್ಕಿಲ್ಲ.
ಉಡುಪಿಯಲ್ಲಿ ಕಾಂಗ್ರೆಸ್​ ಒಂದೂ ಸ್ಥಾನ ಗೆದ್ದಿಲ್ಲ.
ಹೀಗಾಗಿ ಎರಡೂ ಜಿಲ್ಲೆಗಳಿಗೆ ಹೊರಗಿನವರೇ ಉಸ್ತುವಾರಿ ಸಚಿವರಾಗಿದ್ದಾರೆ.
ಚಿಕ್ಕಮಗಳೂರಲ್ಲಿ ಕಾಂಗ್ರೆಸ್​ ಐದೂ ಸ್ಥಾನ ಗೆದ್ದಿತ್ತಾದರೂ ಕಿರಿಯ ಶಾಸಕರೆಂಬ ಕಾರಣಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಚಿಕ್ಕಮಗಳೂರಿಗೆ ಕೆ ಜೆ ಜಾರ್ಜ್​ ಉಸ್ತುವಾರಿ ಸಚಿವರಾಗಿದ್ದಾರೆ. 
ಉತ್ತರ ಕನ್ನಡಕ್ಕೆ ಮಾಂಕಾಳ್​ ವೈದ್ಯ ಉಸ್ತುವಾರಿ ಸಚಿವರಾಗಿದ್ದಾರೆ.