31 ಜಿಲ್ಲೆಗಳ ಪೈಕಿ ಕೆಲವು ಜಿಲ್ಲೆಗಳಿಗೆ ಸಚಿವರಾಗಿರುವ ಬೇರೆ ಜಿಲ್ಲೆಯವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಇವುಗಳಲ್ಲಿ 10 ಜಿಲ್ಲೆಗಳಿಗೆ ಹೊರಗಿನವರೇ ಉಸ್ತುವಾರಿ ಸಚಿವರಾಗಿದ್ದಾರೆ.
ಡಿಕೆ ಶಿವಕುಮಾರ್ – ಬೆಂಗಳೂರು ನಗರ – ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದ ಶಾಸಕ – ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಹಿನ್ನೆಲೆಯಲ್ಲಿ ಇವರಿಗೆ ಬೆಂಗಳೂರು ನಗರ ಉಸ್ತುವಾರಿ ಕೊಡಲಾಗಿದೆ.
ರಾಮಲಿಂಗಾ ರೆಡ್ಡಿ – ರಾಮನಗರ ಉಸ್ತುವಾರಿ – ಬೆಂಗಳೂರು ನಗರ ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ.
ಕೆ ಜೆ ಜಾರ್ಜ್- ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ – ಇವರು ಬೆಂಗಳೂರು ನಗರದ ಸರ್ವಜ್ಞ ನಗರ ಕ್ಷೇತ್ರದ ಶಾಸಕ.
ದಿನೇಶ್ ಗುಂಡೂರಾವ್ – ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ – ಇವರು ಬೆಂಗಳೂರು ನಗರದ ಗಾಂಧಿನಗರ ಕ್ಷೇತ್ರದ ಶಾಸಕ
ಶಿವಾನಂದ ಪಾಟೀಲ – ಹಾವೇರಿ ಉಸ್ತುವಾರಿ – ಇವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಶಾಸಕ
ಜಮೀರ್ ಅಹ್ಮದ್ ಖಾನ್ – ವಿಜಯನಗರ ಜಿಲ್ಲಾ ಉಸ್ತುವಾರಿ – ಇವರು ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಶಾಸಕ
ಶರಣಪ್ರಕಾಶ್ ಪಾಟೀಲ್ – ರಾಯಚೂರು ಜಿಲ್ಲಾ ಉಸ್ತುವಾರಿ – ಇವರು ಕಲಬುರಗಿ ಜಿಲ್ಲೆ ಸೇಡಂ ಕ್ಷೇತ್ರದ ಶಾಸಕ
ಎನ್ ಎಸ್ ಭೋಸೆರಾಜು – ಕೊಡಗು ಜಿಲ್ಲಾ ಉಸ್ತುವಾರಿ – ರಾಯಚೂರು ಜಿಲ್ಲೆಯವರು, ವಿಧಾನಪರಿಷತ್ ಸದಸ್ಯರು
ಕೆ ಎನ್ ರಾಜಣ್ಣ – ಹಾಸನ ಜಿಲ್ಲಾ ಉಸ್ತುವಾರಿ – ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದ ಶಾಸಕ
ಲಕ್ಷ್ಮೀ ಹೆಬ್ಬಾಳ್ಕರ್ – ಉಡುಪಿ ಜಿಲ್ಲಾ ಉಸ್ತುವಾರಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ
ADVERTISEMENT
ADVERTISEMENT