ಯುಎಇಯಿಂದ ಆಮದು ಹೆಚ್ಚಳ – ಭಾರತದ ವ್ಯಾಪಾರ ಕೊರತೆ ಏರಿಕೆ

ಭಾರತ ಮತ್ತು ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ) ನಡುವಿನ ವ್ಯಾಪಾರದ ಅಂತರ ಮೇ-ಜೂನ್​ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಳ ಆಗಿದೆ.

ಯುಎಇ ಜೊತೆಗೆ ಭಾರತ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದ ಜಾರಿ ಆದ ಎರಡೇ ತಿಂಗಳಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರ ಅಂತರ 4 ಪಟ್ಟು ಹೆಚ್ಚಳ ಆಗಿದೆ.

ಭಾರತಕ್ಕೆ ಯುಎಇಯಿಂದ ಆಮದಾಗುತ್ತಿರುವ ಕಚ್ಚಾತೈಲ ಮತ್ತು ಚಿನ್ನದ ಆಮದು ಹೆಚ್ಚಳ ಆಗಿದೆ.

ಯುಎಇ ಜೊತೆಗೆ ಭಾರತದ ವ್ಯಾಪಾರ ಕೊರತೆ ಕಳೆದ ವರ್ಷದ 980 ದಶಲಕ್ಷ ಅಮೆರಿಕನ್​ ಡಾಲರ್​ಗೆ ಹೋಲಿಸಿದ್ರೆ ಜೂನ್​ ಅಂತ್ಯಕ್ಕೆ 3.92 ಶತಕೋಟಿ ಅಮೆರಿಕನ್​ ಡಾಲರ್​​ ಹೆಚ್ಚಳ ಆಗಿದೆ.

ಯುಎಇಗೆ ಭಾರತದ ರಫ್ತು ಶೇಕಡಾ 17.5ರಷ್ಷು ಹೆಚ್ಚಳವಾಗಿದ್ದರೆ, ಭಾರತಕ್ಕೆ ಯುಎಇ ಆಮದು ಶೇಕಡಾ 67ರಷ್ಟು ಹೆಚ್ಚಳ ಆಗಿದೆ. ಕಚ್ಚಾತೈಲ ಆಮದು ಮತ್ತು ಕಚ್ಚಾತೈಲದ ಬೆಲೆ ಹೆಚ್ಚಳವೇ ಈ ವ್ಯಾಪಾರಿ ಕೊರತೆಗೆ ಮುಖ್ಯ ಕಾರಣ.

ಯುಎಇಗೆ ಭಾರತ ಸಿದ್ಧಪಡಿಸಿದ ಉಡುಪುಗಳು, ಆಭರಣ, ಯಂತ್ರೋಪಕರಣ, ಪಾದರಕ್ಷೆ ಮತ್ತು ಆಟೋಮೊಬೈಲ್ಸ್​ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.

 

LEAVE A REPLY

Please enter your comment!
Please enter your name here