ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಲಾಭ ಹೆಚ್ಚಳ

ಸರ್ಕಾರಿ ಸ್ವಾಮ್ಯದ 12 ಬ್ಯಾಂಕುಗಳು ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 15,306 ಕೋಟಿ ರೂಪಾಯಿ ಲಾಭ ಗಳಿಸಿವೆ.

ಏಪ್ರಿಲ್​ 1ರಿಂದ ಜೂನ್​ 30ರ ಅವಧಿಯಲ್ಲಿ ಈ ಬ್ಯಾಂಕುಗಳ ಲಾಭ ಶೇಕಡಾ 9.2ರಷ್ಟು ಹೆಚ್ಚಳ ಆಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 12 ಬ್ಯಾಂಕುಗಳು 14,013 ಕೋಟಿ ರೂಪಾಯಿ ಲಾಭ ಗಳಿಸಿದ್ದವು.

ಆದರೆ 12 ಬ್ಯಾಂಕುಗಳ ಪೈಕಿ ಎಸ್​ಬಿಐ, ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಮತ್ತು ಬ್ಯಾಂಕ್​ ಆಫ್​ ಇಂಡಿಯಾದ ಲಾಭ ಶೇಕಡಾ 7ರಷ್ಟು ಕುಸಿತ ಆಗಿದೆ.

ಉಳಿದ 9 ಬ್ಯಾಂಕುಗಳ ಲಾಭ ಶೇಕಡಾ 3-117ರವರೆಗೆ ಲಾಭ ಗಳಿಸಿವೆ. ಬ್ಯಾಂಕ್​ ಆಫ್​ ಮಹಾರಾಷ್ಟ್ರ ಅತೀ ಹೆಚ್ಚು ಅಂದರೆ 452 ಕೋಟಿ ರೂಪಾಯಿ ಲಾಭ ಗಳಿಸಿವೆ.

 

 

LEAVE A REPLY

Please enter your comment!
Please enter your name here