ತೆಲಂಗಾಣದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಇವತ್ತು ತಿರುಪತಿ ತಿಮ್ಮನ ದರ್ಶನ ಪಡೆದರು.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ (ಈ ಹಿಂದಿನ ಟ್ವಿಟ್ಟರ್) ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಓಂ ನಮೋ ವೆಂಕಟೇಶಾಯ, ತಿರುಮಲದಿಂದ ಕೆಲವು ಫೋಟೋಗಳು ಎಂಬ ಶೀರ್ಷಿಕೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ತೆಲಂಗಾಣ ಬಹಿರಂಗ ಪ್ರಚಾರಕ್ಕೆ ನಾಳೆ ಕಡೆಯ ದಿನವಾಗಿದ್ದು, ಇವತ್ತು ರಾಜಧಾನಿ ಹೈದ್ರಾಬಾದ್ನಲ್ಲಿ ಪ್ರಧಾನಿ ಮೋದಿಯವರು ರೋಡ್ ಶೋ ಕೈಗೊಳ್ಳಲಿದ್ದಾರೆ.
ADVERTISEMENT
ADVERTISEMENT