ADVERTISEMENT
ಭಾರತದ ಎರಡು ಸಿನಿಮಾಗಳು ಆಸ್ಕರ್ ಪ್ರಶಸ್ತಿ ಗೆದ್ದಿವೆ.
ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಎಲಿಫೆಂಟ್ ವಿಪ್ಸರ್ಸ್ (ಆನೆಯ ಪಿಸುಮಾತುಗಳು) ಅತ್ಯುತ್ತಮ ಸಾಕ್ಷ್ಯ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ.
ಈ ಚಿತ್ರವನ್ನು ಕಾರ್ತಿಕಿ ಗೊನ್ಸಾಲ್ವೇಸ್ ನಿರ್ದೇಶಿಸಿದ್ದು ಗುನಿತ್ ಮೊಂಗಾ ನಿರ್ಮಿಸಿದ್ದಾರೆ.
ತಮಿಳುನಾಡಿನ ಮಧುಮಲೈ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಕುಟುಂಬವೊಂದು ಅನಾಥವಾಗಿದ್ದು ಎರಡು ಆನೆ ಮರಿಗಳನ್ನು ದತ್ತುಕೊಂಡ ಬಗ್ಗೆ ಸಾಕ್ಷ್ಯಚಿತ್ರವಾಗಿದೆ.
2019ರಲ್ಲೂ ಗುನಿತ್ ಮೊಂಗಾ ಅವರು ನಿರ್ಮಿಸಿದ್ದ ‘Period. End of Sentence’ ಅವರ ಸಾಕ್ಷ್ಯಚಿತ್ರ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಗೆದ್ದಿತ್ತು.
ಆರ್ಆರ್ಆರ್ಗೆ ಅತ್ಯುತ್ತಮ್ಮ ಹಾಡು:
ಆರ್ಆರ್ಆರ್ ಸಿನಿಮಾದ ನಾಟು ನಾಟು ಹಾಡಿಗೆ ಅತ್ಯುತ್ತಮ ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ.
ADVERTISEMENT