ಯಾವುದೇ ಸಿನಿಮಾ ಕಲಾವಿದರಿಗೆ, ತಂತ್ರಜ್ಞರಿಗೆ ಆಸ್ಕರ್ ಗೆಲ್ಲುವುದು ಒಂದು ಕನಸು.. 95 ವರ್ಷಗಳ ಆಸ್ಕರ್ ಇತಿಹಾಸದಲ್ಲಿ ಈವರೆಗೂ ಎಷ್ಟು ಮಂದಿ ಭಾರತೀಯರು ಆಸ್ಕರ್ ಪ್ರಶಸ್ತಿ ಗೆದ್ದಿದ್ದಾರೆ ಗೊತ್ತಾ?
ಆಸ್ಕರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯರು ಭಾನು ಅಥೈಯಾ ಚರಿತ್ರೆಯ ಪುಟಗಳಲ್ಲಿ ಚಿರಸ್ಥಾಯಿ ಆಗಿದ್ದಾರೆ. 1983ರಲ್ಲಿ ನಡೆದ 55ನೇ ಆಸ್ಕರ್ ಸಮಾರಂಭದಲ್ಲಿ ಭಾನು ಅಥೈಯಾ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
1982ರಲ್ಲಿ ರಿಲೀಸ್ ಆದ ಗಾಂಧಿ ಸಿನಿಮಾಗೆ ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದರು.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 1929ರ ಏಪ್ರಿಲ್ ೨೮ರಂದು ಜನಿಸಿದ್ದರು. ಇವರ ಅಸಲಿ ಹೆಸರು ಭಾನುಮತಿ ಅಣ್ಣಾಸಾಹೇಬ್ ರಾಜೋಪಧ್ಯಾಯ್. ಈಕೆಯ ತಂದೆ ಹಲವು ಸಿನಿಮಾಗಳಿಗೆ ಫೋಟೋಗ್ರಫಿ ಮಾಡಿದ್ದರು. ಇದರಿಂದ ಸಿನಿಮಾಗಳ ಬಗ್ಗೆ ಭಾನು ಅಥೈಯ್ಯಗೆ ಆಸಕ್ತಿ ಕುದುರಿತ್ತು.
1956ರಲ್ಲಿ ಸಿಐಡಿ ಸಿನಿಮಾಗೆ ಮೊದಲ ಬಾರಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರು. ಲಗಾನ್ ಸಿನಿಮಾ ಸೇರಿ 100ಕ್ಕೂ ಹೆಚ್ಚು ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದರು. ಅನಾರೋಗ್ಯ ಸಮಸ್ಯೆಗಳ ಕಾರಣ 91ನೇ ವಯಸ್ಸಿನಲ್ಲಿ ಅಂದರೆ 2020ರ ಅಕ್ಟೋಬರ್ 15ರಂದು ಸಾವನ್ನಪ್ಪಿದರು.
ಆ ಪುರಸ್ಕಾರ ಪಡೆದ ಏಕೈಕ ಭಾರತೀಯ ಅವರು:
ಭಾರತ ಚಿತ್ರರಂಗದ ದೆಸೆ, ದಿಶಾ ಬದಲಿಸಿದ ದರ್ಶಕ ದಿಗ್ಗಕ ಸತ್ಯಜಿತ್ ರೇ. ಪಥೆರ್ ಪಾಂಚಾಲಿ, ಅಪರಾಜಿತೋ, ದೇವಿ, ಅಪೂ ಸಂಸಾರ್, ಕಾಂಚನಜಂಗಾ,ಚಾರುಲತಾ ಸೇರಿ 36 ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು.
ಸ್ಕ್ರೀನ್ಪ್ಲೇ, ಕತೆ, ಚಿತ್ರಕತೆ, ಎಡಿಟರ್, ಸಿನಿಮಾಟೋಗ್ರಾಫರ್, ಸಂಗೀತ ನಿರ್ದೇಶಕ, ಕಲಾವಿದ, ಕಲಾ ನಿದೇಶಕ.. ಲೇಖನ, ಕಾದಂಬರಿ.. ಹೀಗೆ ಸಿನಿಮಾಗೆ ಸಂಬಂಧಿಸಿದ ಎಲ್ಲಾ ವಿಭಾಗಗಳಲ್ಲೂ ಸತ್ಯಜಿತ್ ನಿಸ್ಸೀಮರಾಗಿದ್ದರು.
ಸಿನಿಮಾ ರಂಗಕ್ಕೆ ಸತ್ಯಜಿತ್ ರೇಯ ಅನುಪಮ ಸೇವೆ ಗುರುತಿಸಿದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 1992ರಲ್ಲಿ ಹಾನರಿ ಅವಾರ್ಡ್ ಪ್ರಕಟಿಸಿತು. ಅನಾರೋಗ್ಯ ಕಾರಣ ಸತ್ಯಜಿತ್ ರೇ ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ.
ಹೀಗಾಗಿ ಸತ್ಯಜಿತ್ ರೇ ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಕೊತಾದ ಆಸ್ಪತ್ರೆಗೆ ಬಂದು ಪ್ರಶಸ್ತಿ ನೀಡಿ ಗೌರವಿಸಿತ್ತು.
ಈ ಹಾನರರಿ ಅವಾರ್ಡ್ ಪಡೆದ ಏಕೈಕ ಭಾರತೀಯ ಇವರು. 1992ರ ಏಪ್ರಿಲ್ 23ರಂದು ಸತ್ಯಜಿತ್ ರೇ ಇಹಲೋಕ ತ್ಯಜಿಸಿದರು.
1992 ಬಳಿಕ 2009ರಲ್ಲಿಯೇ:
2009ರಲ್ಲಿ ಸ್ಲಂಡಾಗ್ ಮಿಲಿನಿಯರ್ ಚಿತ್ರಕ್ಕಾಗಿ ಒಂದಲ್ಲ..ಎರಡಲ್ಲ..ಬರೋಬ್ಬರಿ ಮೂರು ಆಸ್ಕರ್ ಪ್ರಶಸ್ತಿಗಳನ್ನು ಭಾರತೀಯರು ಗೆದ್ದುಕೊಂಡಿತು. ಈ ಚಿತ್ರದ ಬೆಸ್ಟ್ ಸೌಂಡ್ ಮಿಕ್ಸಿಂಗ್ ಕೆಟಗರಿಯಲ್ಲಿ ರಸೂಲ್ ಪೂಕುಟ್ಟಿ, ರಿಚರ್ಡ್ ಫ್ರೈಕ್, ಇಯಾನ್ ಟ್ಯಾಪ್ ಜೊತೆಗೂಡಿ ಆಸ್ಕರ್ ಪುರಸ್ಕಾರವನ್ನು ಪಡೆದರು.
ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಜಯಹೋ ಹಾಡಿಗೆ ಖ್ಯಾತ ಕವಿ ಗುಲ್ಜಾರ್ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ.
ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರಿಗೆ ಬೆಸ್ಟ್ ಒರಿಜಿನಲ್ ಸಾಂಂಗ್ ಮತ್ತು ಸ್ಕೋರ್ ವಿಭಾಗದಲ್ಲಿ ಎರಡು ಆಸ್ಕರ್ ಪ್ರಶಸ್ತಿ ಲಭಿಸಿವೆ
ಉತ್ತಮ ಡಾಕ್ಯುಮೆಂಟರಿ ವಿಭಾಗದಲ್ಲಿ: