ಆಸ್ಕರ್ ವೇದಿಕೆಯಲ್ಲಿ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಈ ಹಾಡಿನ ಕೆಲ ಆಸಕ್ತಿದಾಯಕ ಅಂಶಗಳು ನಿಮಗಾಗಿ.
ನಾಟು ನಾಟು ಹಾಡನ್ನು ಮೊದಲು ನಮ್ಮ ದೇಶದಲ್ಲಿ ಚಿತ್ರೀಕರಿಸಲು ಚಿತ್ರ ತಂಡ ನಿರ್ಧರಿಸಿತ್ತು. ಶೂಟಿಂಗ್ ಶೆಡ್ಯೂಲ್ ಮಾಡಿದಾಗ ದೇಶದಲ್ಲಿ ಭಾರೀ ಮಳೆ ಆಗುತ್ತಿತ್ತು. ಹೀಗಾಗಿ ಬೇರೆ ಬೇರೆ ಪ್ರದೇಶಗಳ ಬಗ್ಗೆ ಹುಡುಕುತ್ತಿದ್ದಾಗ ಉಕ್ರೇನ್‌ನ ಒಂದು ಭವನವನ್ನು ನೋಡಿ ಇಲ್ಲಿಯೇ ಶೂಟಿಂಗ್ ಮಾಡೋಣ ಎಂದು ರಾಜಮೌಳಿ ಫಿಕ್ಸ್ ಆದರಂತೆ.
ಎಲ್ಲಾ ಓಕೆ ಆದುಕೊಂಡು ಉಕ್ರೇನ್‌ಗೆ ಹೋಗಿ ಶೂಟಿಂಗ್ ಮಾಡೋಣ ಎಂದುಕೊಳ್ಳುವಾಗ ಅದು ಪ್ರೆಸಿಡೆನ್ಶಿಯಲ್ ಪ್ಯಾಲೇಸ್ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಅನುಮತಿ ಸಿಗುವುದು ಕಷ್ಟವಾಗುತ್ತೆ ಎಂದು ಎಲ್ಲರು ಭಾವಿಸಿದ್ದರು. ಆದರೆ, ಅಲ್ಲಿನ ಅಧಿಕಾರಿಗಳು ನೋ ಪ್ರಾಬ್ಲಂ, ಶೂಟ್ ಮಾಡಿಕೊಳ್ಳಿ ಎಂದು ಪರ್ಮೀಷನ್ ಕೊಟ್ಟರು. ಹಾಡಿನಲ್ಲಿ ಒಂದು ಕಡೆ ಉಕ್ರೇನ್ ಸಂಸತ್ ಭವನದ ಡೋಮ್ ಕೂಡ ಕಾಣಬಹುದು.
ಹಾಡಿನ ಬ್ಯಾಕ್‌ಗ್ರೌಂಡ್‌ನಲ್ಲಿ ಕಾಣಿಸುವ ಯುವತಿಯರು, ಮ್ಯೂಸಿಷಿಯನ್ಸ್ ಜ್ಯೂನಿಯರ್ ಆರ್ಟಿಸ್ಟ್‌ಗಳಲ್ಲ.. ಅವರೆಲ್ಲಾ ನಿಜವಾದ ಡ್ಯಾನ್ಸರ್‌ಗಳು.. ನಿಜವಾದ ಮ್ಯೂಸಿಷಿಯನ್‌ಗಳು.. ಲೈವ್ಲಿನೆಸ್‌ಗಾಗಿ ಹೀಗೆ ಮಾಡಿದ್ರಂತೆ ರಾಜಮೌಳಿ. ಅವರಿಗೆ ಸ್ಟೆಪ್ಸ್ ಇಲ್ಲದಿದ್ದರೂ ಹಾಡನ್ನು ಎಂಜಾಯ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ.. ಇದನ್ನು ಹಾಡಿನಲ್ಲಿ ಬೇಕಿದ್ದರೇ ಗಮನಿಸಬಹುದು.
ಹಾಡಿನ ಐಕಾನಿಕ್ ಸ್ಟೆಪ್‌ಗಾಗಿ ಕೋರಿಯೋಗ್ರಾಫರ್ ಪ್ರೇಮ್‌ರಕ್ಷಿತ್ ಸುಮಾರು ೧೦೦ಕ್ಕೂ ಹೆಚ್ಚು ಸ್ಟೆಪ್ಸ್ ಕಂಪೋಸ್ ಮಾಡಿದ್ದರು. ಅದಲ್ಲಿ ಒಂದು ಮೂವ್‌ಮೆಂಟ್ ಅನ್ನು ರಾಜಮೌಳಿ ಆಯ್ಕೆ ಮಾಡಿದ್ದರು. ಈ ಹಾಡಿನ ವಿಜಯದ ಫಸ್ಟ್ ಕ್ರೆಡಿಟ್ ಪ್ರೇಮ್ ರಕ್ಷಿತ್‌ಗೆ ರಾಜಮೌಳಿ ನೀಡಿದ್ದಾರೆ.
ರಾಜಮೌಳಿ ಪ್ರಕಾರ ಈ ಹಾಡಿನ ಬೆಸ್ಟ್ ಶಾಟ್.. ರಾಮ್‌ಚರಣ್, ಜ್ಯೂ.ಎನ್‌ಟಿಆರ್ ಸ್ಟೆಪ್ ಅಲ್ಲವಂತೆ.. ಇವರಿಬ್ಬರ ಡ್ಯಾನ್ಸ್ ನೋಡುತ್ತಾ ಜೆನ್ನಿ (ಓಲಿವಿಯಾ ಮೊರೆಸ್) ವಾವ್ ಎಂದು ಕೊಟ್ಟ ಎಕ್ಸ್‌ಪ್ರೆಷನ್ ಅಂತೆ..