ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿಯೇ ಸೋಲಿಸ್ತೀವಿ ಎಂದು ಪಣತೊಟ್ಟಿರುವ ಬಿಜೆಪಿಗೆ ದೊಡ್ಡ ಮುಖಭಂಗವಾಗಿದೆ.
ಕೋಲಾರದಲ್ಲಿ ಬಿಜೆಪಿ ಆಯೋಜಿಸಿದ್ದ ವಿಜಯಸಂಕಲ್ಪ ಯಾತ್ರೆ ಜನರಿಲ್ಲದೇ ದಿಢೀರ್ ರದ್ದಾಗಿದೆ.
ಕೋಲಾರದಲ್ಲಿ ಬಿಜೆಪಿ ಬೃಹತ್ ಸಮಾವೇಶಕ್ಕೆ ಹಾಕಲಾಗಿದ್ದ ಕುರ್ಚಿಗಳೆಲ್ಲವೂ ಜನರಿಲ್ಲದೇ ಖಾಲಿ ಖಾಲಿಯಾಗಿದ್ದವು.
ಸಮಾವೇಶದ ಜವಾಬ್ದಾರಿಯನ್ನು ಕೋಲಾರ ಉಸ್ತುವಾರಿ ಸಚಿವ ಮುನಿರತ್ನ, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್, ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ವಹಿಸಲಾಗಿತ್ತು.
ಸಮಾವೇಶಕ್ಕೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಬರಬೇಕಿತ್ತು.
ಮಾಲೂರು ಪಟ್ಟಣದಲ್ಲಿ ರೋಡ್ ಶೋ ಬಳಿಕ ಭಾನುವಾರ ಸಂಜೆ 5 ಗಂಟೆಗೆ ಕೋಲಾರ ನಗರದ ಬೈರೇಗೌಡ ಬಡಾವಣೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದರು.
ಆದರೆ ಸಮಾವೇಶಕ್ಕೆ ಜನರೇ ಬಾರದ ಕಾರಣ ವಿಜಯ ಸಂಕಲ್ಪ ಯಾತ್ರೆ ಸಮಾವೇಶವನ್ನು ದಿಢೀರ್ ರದ್ದುಗೊಳಿಸಿ ಮೂವರು ಸಚಿವರು ಕೋಲಾರದಿಂದ ನಿರ್ಗಮಿಸಿದರು.
ADVERTISEMENT
ADVERTISEMENT