CM ರೋಡ್​ ಶೋನಲ್ಲಿ ನಾಯಕಿಗೆ ಮುತ್ತು ಕೊಟ್ಟ MLA – ನಕಲಿ ವೀಡಿಯೋ ಆರೋಪ – ಇಬ್ಬರ ಬಂಧನ

ಮುಖ್ಯಮಂತ್ರಿ ಕೈಗೊಂಡಿದ್ದ ರೋಡ್​ ಶೋ ವೇಳೆ ಪಕ್ಕದಲ್ಲೇ ನಿಂತಿದ್ದ ಪಕ್ಷದ ಮಹಿಳಾ ನಾಯಕಿಗೆ ಶಾಸಕರೊಬ್ಬರು ಮುತ್ತು ಕೊಟ್ಟಿರುವ ವೀಡಿಯೋವೊಂದು ಹರಿದಾಡಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರು ಕೈಗೊಂಡಿದ್ದ ರೋಡ್​ ಶೋ ವೇಳೆ ಶಿಂಧೆ ಬಣದ ಶಾಸಕ ಪ್ರಕಾಶ್​ ಸುರ್ವೆ ಮತ್ತು ಪಕ್ಷದ ನಾಯಕಿ ಶೀತಲ್​ ಅವರು ಪಕ್ಕಪಕ್ಕ ನಿಂತಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಹಬ್ಬಿರುವ ಈ ವೀಡಿಯೋವನ್ನು ಈಗ ಬಿಆರ್​ಎಸ್​ ಪಕ್ಷದ ನಾಯಕರು ಕೂಡಾ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆದರೆ ವೀಡಿಯೋ ನಕಲಿ ಎಂದು ಶಾಸಕ ಸುರ್ವೆ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.  ದೂರಿನ ಆಧಾರದಲ್ಲಿ ಮುಂಬೈ ಪೊಲೀಸರು ಮನಸ್​ ಕುವರ್​ ಮತ್ತು ಅಶೋಕ್​ ಮಿಶ್ರಾ ಎಂಬ ಇಬ್ಬರನ್ನು ನಕಲಿ ವೀಡಿಯೋ ಹಂಚಿದ್ದರ ಆರೋಪ ಸಂಬಂಧ ಬಂಧಿಸಲಾಗಿದೆ.

ಇತ್ತ ಶೀತಲ್​ ಮಾತ್ರೆ ಅವರು ವೀಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ.

ಮಾತೋಶ್ರೀ ಎಂಬ ಎಫ್​ಬಿ ಖಾತೆಯಿಂದ ಈ ನಕಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಹಂಚಿಕೊಳ್ಳುವಾಗ ಬಾಳಾಸಾಹೇಬ್​ ಅವರು ಕಲಿಸಿದ ಸಂಸ್ಕಾರ ನೆನೆಪಾಗ್ಲಿಲ್ವಾ..? ಮಹಿಳೆಯ ಚಾರಿತ್ರ್ಯ ವಧೆ ಮಾಡುವುದು ಎಷ್ಟು ಸರಿ..?

ಎಂದು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here