ನಟಿ ಸಮಂತಾ ಮೇಲಿನ ಅಭಿಮಾನದಿಂದ ಆಕೆಗೆ ದೇಗುಲವೊಂದನ್ನು ಕಟ್ಟಿದ್ದಾನೆ ಒಬ್ಬ ಅಭಿಮಾನಿ.
ಆಂಧ್ರದ ಬಾಪಟ್ಲ ಜಿಲ್ಲೆ ಚುಂಡೂರು ಮಂಡಲದ ಅಲಪಾಡು ಗ್ರಾಮದ ತೆನಾಲಿ ಸಂದೀಪ್ ನಟಿ ಸಮಂತಾಗೆ ವೀರಾಭಿಮಾನಿ. ಆಕೆಯ ಅಭಿನಯ.. ಜೊತೆಗೆ ಸೇವಾ ಕಾರ್ಯಕ್ರಮ.. ಅದರಲ್ಲೂ ಮುಖ್ಯವಾಗಿ ಪ್ರತ್ಯೂಷ ಫೌಂಡೇಷನ್ ಮೂಲಕ ಚಿಕ್ಕಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿದ್ದನ್ನು ತಿಳಿದ ತೆನಾಲಿ ಸಂದೀಪ್ ಫಿದಾ ಆಗಿದ್ದಾರೆ. ಅನಾರೋಗ್ಯಪೀಡಿತ ಚಿಕ್ಕಮಕ್ಕಳಿಗೆ ಪುನರ್ಜನ್ಮ ಪ್ರಸಾದಿಸುತ್ತಿರುವ ನಟಿ ಸಮಂತಾ ಮೇಲೆ ತೆನಾಲಿಗೆ ಅಭಿಮಾನ ದುಪ್ಪಟ್ಟಾಗಿ ಮನೆಯ ಆವರಣದಲ್ಲೇ ಸಮಂತಾ ದೇಗುಲ ನಿರ್ಮಿಸಿದ್ದಾರೆ. ನಟಿ ಸಮಂತಾ ಅವರ ವಿಗ್ರಹವನ್ನು ಕೆತ್ತನೆ ಮಾಡಿಸಿದ್ದಾರೆ.
ಸಮಂತಾ ಜನ್ಮದಿನವಾದ ನಿನ್ನೆ ಸಮಂತಾ ದೇಗುಲ ಲೋಕಾರ್ಪಣೆ ಮಾಡಿದ್ದಾರೆ. ಅಂದ ಹಾಗೇ, ತೆನಾಲಿ ಸಂದೀಪ್ ಈವರೆಗೂ ನಟಿ ಸಮಂತಾರನ್ನು ನೇರವಾಗಿ ಭೇಟಿಯೇ ಮಾಡಿಲ್ಲ.
ನಟಿಯರಿಗೆ ದೇಗುಲ ಇದೇ ಮೊದಲೇನು ಅಲ್ಲ.
* ನಟಿ ಖುಷ್ಬು ಸುಂದರ್‌ಗೆ 90ರ ದಶಕದಲ್ಲಿ ತಮಿಳುನಾಡಿನ ಅಭಿಮಾನಿಯೊಬ್ಬ ತಿರುಚರಾಪಲ್ಲಿ ದೇವಾಲಯ ನಿರ್ಮಿಸಿದ್ದರು
* ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ನಮಿತಾಗೆ ಕೋಲಿವುಡ್‌ನಲ್ಲಿ ಭಾರೀ ಕ್ರೇಜ್ ಇದೆ.. ಹೀಗಾಗಿಯೇ ನಮಿತಾಗೆ ಕೊಯಮತ್ತೂರು, ತಿರುನಲ್ವೇಲಿ ಸೇರಿ ಒಟ್ಟು ಮೂರು ಕಡೆ ಅಭಿಮಾನಿಗಳು ದೇಗುಲ ನಿರ್ಮಿಸಿದ್ದಾರೆ.
* ನಟಿ ಹನ್ಸಿಕಾ.. ತಮಿಳು ಮತ್ತು ತೆಲುಗಿನಲ್ಲಿ ಫೇಮಸ್ ಆದ ಈ ನಟಿಗೆ ಚೆನ್ನೈ ಹೊರವಲಯದಲ್ಲಿ ಮಂದಿರ ನಿರ್ಮಿಸಲಾಗಿದೆ.
* ಯುವನಟಿ ನಿಧಿ ಅಗರ್ವಾಲ್‌ಗೆ ತಮಿಳುನಾಡಿನಲ್ಲಿ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಇದೆ.. ಕೆಲವರು ಚೆನ್ನೈ ಹೊರಭಾಗದಲ್ಲಿ ಮಂದಿರ ನಿರ್ಮಿಸಿದ್ದಾರೆ.
* ನಟಿ ಕಾಜಲ್ ಅಗರ್ವಾಲ್.. ತೆಲುಗು, ತಮಿಳಿನ ಸ್ಟಾರ್ ಹೀರೋಯಿನ್ ಆಗಿರುವ ಕಾಜಲ್‌ಗೆ ತಮಿಳುನಾಡಿನಲ್ಲಿ ಕೆಲ ಅಭಿಮಾನಿಗಳು ದೇಗುಲ ನಿರ್ಮಿಸಲು ಮುಂದಾಗಿದ್ದರು. ವಿಷಯ ತಿಳಿದ ಕಾಜಲ್ ಬೇಡ ಎಂದ ಕಾರಣ ದೇಗುಲ ನಿರ್ಮಾಣ ನಿಲ್ಲಿಸಿದರು.
* ನಟಿ ನಯನತಾರಾ.. ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ತಮಿಳುನಾಡಿನಲ್ಲಿ ದೇಗುಲ ನಿರ್ಮಿಸಲು ಮುಂದಾಗಿದ್ದರು. ಆದರೆ, ನಯನತಾರಾ ಬೇಡ ಎಂದು ನಿಲ್ಲಿಸಿದರು.
* ನಗ್ಮಾ.. 90ರ ದಶಕದಲ್ಲಿ ತಮಿಳು, ತೆಲುಗಿನಲ್ಲಿ ಕ್ರೇಜಿ ಹೀರೋಯಿನ್ ಆಗಿದ್ದ ನಗ್ಮಾಗೆ ತಮಿಳುನಾಡಿನ ಹಲವೆಡೆ ಅಭಿಮಾನಿಗಳು ದೇಗುಲಗಳನ್ನು ನಿರ್ಮಿಸಿದ್ದರು. ಕಾಲಕ್ರಮೇಣ ಇವು ತೆರೆಮರೆಗೆ ಸರಿದವು.
* ಪೂಜಾ ಉಮಾಶಂಕರ್.. ಇಂಡೋ ಶ್ರೀಲಂಕನ್ ನಟಿ.. ಹೆಚ್ಚಾಗಿ ತಮಿಳಿನಲ್ಲಿ ನಟಿಸಿದ್ದಾರೆ.. ಈಕೆಗೆ ತಮಿಳುನಾಡಿನ ಕೊಲಂಬೋದಲ್ಲಿ ಗುಡಿ ನಿರ್ಮಿಸಲಾಗಿದೆ.