BIG BREAKING – ಮೇ ಒಂದರಿಂದ ಶಿರಡಿ ಬಂದ್


ಶಿರಡಿ ಸಾಯಿಬಾಬಾ ಆಲಯಕ್ಕೆ ಸಿಐಎಸ್ಎಫ್ ಭದ್ರತೆ ಒದಗಿಸಲು ಮುಂದಾಗಿರುವುದನ್ನು ಗ್ರಾಮಸ್ಥರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಸಿಐಎಸ್ಎಫ್ ಭದ್ರತೆ ವಿರೋಧಿಸಿ ಮೇ 1ರಿಂದ ಅನಿರ್ದಿಷ್ಟಾವಧಿಗೆ ಶಿರಡಿ ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶಿರಡಿ ಸಾಯಿಬಾಬಾ ಮಂದಿರಕ್ಕೆ ಮತ್ತಷ್ಟು ಭದ್ರತೆ ಒದಗಿಸಲು ಸಾಯಿ ಸಂಸ್ಥಾನ್ ಟ್ರಸ್ಟ್ ಮತ್ತು ಮಹಾರಾಷ್ಟ್ರ ಪೊಲೀಸರು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಮಂದಿರಕ್ಕೆ ಸಿಐಎಸ್ಎಫ್ ಭದ್ರತೆ ಕಲ್ಪಿಸಲು ಕಸರತ್ತು ಆರಂಭಿಸಿದ್ದಾರೆ. ಆದರೆ ಇದನ್ನು ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿದ್ದಾರೆ

ಸದ್ಯ ಸಾಯಿಬಾಬಾ ಮಂದಿರದ ಭದ್ರತೆಯನ್ನು ಸಾಯಿ ಸಂಸ್ಥಾನದ ಸಿಬ್ಬಂದಿಯೇ ನಿರ್ವಹಿಸುತ್ತಿದ್ದಾರೆ.ಮಂದಿರದ ಪ್ರಾಂಗಣದ ಭದ್ರತೆಯನ್ನು ಮಹಾರಾಷ್ಟ್ರ ಪೊಲೀಸರು ನಿರ್ವಹಣೆ ಮಾಡುತ್ತಿದ್ದಾರೆ.

ಗ್ರಾಮಸ್ಥರ ಬೇಡಿಕೆ ಏನು?

* ಸಾಯಿಬಾಬಾ ಮಂದಿರಕ್ಕೆ ಸಿಐಎಸ್ಎಫ್ ಭದ್ರತೆ ಬೇಡ
ಸಾಯಿ ಸಂಸ್ಥಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹುದ್ದೆಯನ್ನು ರದ್ದು ಮಾಡಬೇಕು

* ಡಿಸಿ, ತಹಶೀಲ್ದಾರ್ ಅವರನ್ನು ಒಳಗೊಂಡ ಸಮಿತಿ ರಚನೆ ಮಾಡಬೇಕು

* ಶಿರಡಿ ಸಾಯಿ ಸಂಸ್ಥಾನ್ ಟ್ರಸ್ಟಿಗಳ ಬೋರ್ಡ್ ಅನ್ನು ಆದಷ್ಟು ಬೇಗ ನೇಮಕ ಮಾಡಬೇಕು

* ಇದರಲ್ಲಿ ಶೇಕಡಾ 50ರಷ್ಟು ಧರ್ಮದರ್ಶಿಗಳು ಶಿರಡಿ ಗ್ರಾಮದವರೇ ಆಗಿರಬೇಕು