ಅಬ್ಬಬ್ಬಾ 26 ದಿನಗಳ ನರಕ.. ಟೈಡ್ ಸರ್ಫ್ ಜೊತೆ ಸ್ನಾನ.. ಟಾಯ್ಲೆಟ್ ನೀರಿನಲ್ಲಿ ಕಾಫಿ..

ಇತ್ತೀಚಿಗೆ ದುಬೈನಲ್ಲಿ ಡ್ರಗ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ಬಾಲಿವುಡ್ ನಟಿ ಕ್ರಿಸಾನ್ ಪೆರೀರಾ ಮೊನ್ನೆಯಷ್ಟೇ ಜೈಲಿನಿಂದ ರಿಲೀಸ್ ಆಗಿದ್ದಾರೆ. ಹೆಚ್ಚುಕಡಿಮೆ 26 ದಿನ ಪ್ರತ್ಯಕ್ಷ ನರಕ ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ.

ನಾನು ಜೈಲಿನಲ್ಲಿ ಇದ್ದ ಅಷ್ಟು ದಿನಗಳು ತುಂಬಾ ತೊಂದರೆ ಅನುಭವಿಸಿಎ. ಟೈಡ್ ಸರ್ಫ್ ಬಳಸಿ ಸ್ನಾನ ಮಾಡುತ್ತಿದೆ. ಟಾಯ್ಲೆಟ್ ನೀರಿನಿಂದ ಮಾಡಿದ ಕಾಫಿ ಕುಡಿದೆ ಎಂದು ಕ್ರಿಸಾನ್ ಪೆರಿರಾ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಜೈಲಿನಲ್ಲಿ ಕನಿಷ್ಟ ಪೆನ್ ಕೂಡ ಸಿಗಲಿಲ್ಲ. ಒಂದು ಪೆನ್ ಪಡೆಯಲು ನನಗೆ 20 ದಿನ ಬೇಕಾಯಿತು.. ಇಂತಹ ನರಕದ ಜೀವನ ಮತ್ತೆಂದು ಬರಬಾರದು ಎಂದು ದೇವರಲ್ಲಿ ಕೋರುವೆ. ನಮ್ಮ ಶತ್ರುಗಳಿಗೂ ಇಂತಹ ಗತಿ ಬರಬಾರದು ಎಂದು ಪೆರಿರಾ ಹೇಳಿದ್ದಾರೆ.

ಡ್ರಗ್ಸ್ ಸ್ಮಗ್ಲಿಂಗ್ ಪ್ರಕರಣ ಸಂಬಂಧ ಕ್ರಿಸಾನ್ ಪೆರಿರಾ ಅವರನ್ನು ಈ ತಿಂಗಳ ಆರಂಭದಲ್ಲಿ ಷಾರ್ಜಾ ಪೊಲೀಸರು ಬಂಧಿಸಿದ್ದರು. ಆಕೆಯ ಬಳಿಯಿದ್ದ ಟ್ರೋಫಿಯಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಆದರೆ, ಕ್ರಿಸಾನ್ ರನ್ನು ಡ್ರಗ್ಸ್ ಕೇಸ್ ನಲ್ಲಿ ಸಿಲುಕಿಸಲು ಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದರು.

27 ವರ್ಷದ ಕ್ರಿಸಾನ್ ಪೆರಿರಾ ಸಡಕ್ 2. ಬಾಟ್ಲಾ ಹೌಸ್ ಸೇರಿ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು.