ಕರಾವಳಿ ಕರ್ನಾಟಕದಲ್ಲಿ 1 ವಾರ ಅಧಿಕ ಬಿಸಿಲಿನ ಝಳದ ಎಚ್ಚರಿಕೆ

ಕರಾವಳಿ ಕರ್ನಾಟಕದಲ್ಲಿ ಮಾರ್ಚ್​ 9ರಿಂದ ಮಾರ್ಚ್​ 15ರವರೆಗೆ ಸಾಮಾನ್ಯಕ್ಕಿಂತ ಅಧಿಕ ಉಷ್ಣಾಂಶ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮಾರ್ಚ್​ 9ರಿಂದ ಮಾರ್ಚ್​ 15ವರೆಗೆ ಕರಾವಳಿ ಕರ್ನಾಟಕದಲ್ಲಿ ವಾಡಿಕೆಗಿಂತ 4ರಿಂದ 6 ಡಿಗ್ರಿ ಸೆಲ್ಸಿಯಸ್​ ತಾಪಮಾನ ಹೆಚ್ಚಿರಲಿದೆ ಎಂದು ಐಎಂಡಿ ಹೇಳಿದೆ.

ಜಮ್ಮು-ಕಾಶ್ಮೀರ, ಗೋವಾದಲ್ಲೂ ಈ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ಇರಲಿದೆ.

ಮಾರ್ಚ್​ 16ರಿಂದ ಮಾರ್ಚ್​ 22ರವರೆಗೆ ಕರಾವಳಿ ಕರ್ನಾಟಕ, ಜಮ್ಮು-ಕಾಶ್ಮೀರ ಮತ್ತು ಗೋವಾದಲ್ಲಿ ವಾಡಿಕೆಗಿಂತ ಕಡಿಮೆ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮಾರ್ಚ್​ 8ರಂದು ಕಾರವಾರದಲ್ಲಿ ಭಾರತದಲ್ಲೇ ಅತ್ಯಧಿಕ ತಾಪಮಾನ ದಾಖಲಾಗಿತ್ತು. ಅವತ್ತು ಕಾರವಾರದಲ್ಲಿ ಉಷ್ಣಾಂಶ 40.2 ಡಿಗ್ರಿ ಸೆಲ್ಸಿಯಸ್​ ಇತ್ತು.

LEAVE A REPLY

Please enter your comment!
Please enter your name here