ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾ ಅರಣ್ಯಾಧಿಕಾರಿ (DFO)

ಕೆಳ ಹಂತದ ಅಧಿಕಾರಿಯಿಂದ ಶೇಕಡಾ 60ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಅರಣ್ಯಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಮಡಿಕೇರಿ ಅರಣ್ಯ ವಿಭಾಗದ ಡಿಎಫ್​ಒ ಪೂರ್ಣಿಮಾ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 50 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಈಕೆಯನ್ನು ರೆಡ್​ಹ್ಯಾಂಡಾಗಿ ಬಂಧಿಸಲಾಯಿತು.

ಅರಣ್ಯ ಇಲಾಖೆ ಎರಡು ಅರಣ್ಯ ಕಾವಲುಗಾರರ ಹುದ್ದೆಯನ್ನು ಮಂಜೂರು ಮಾಡಿತ್ತು ಮತ್ತು ಮಯೂರ ಉದಯ್​ ಕರವೆಕರ್​ ಅವರಿಗೆ ಆ ಹುದ್ದೆಗೆ ನೇಮಕಾತಿ ಮಾಡುವ ಅಧಿಕಾರ ನೀಡಿತ್ತು. 

ಆದರೆ ಇನ್ನೆರಡು ನಕಲಿ ನೇಮಕಾತಿಗಳನ್ನು ಮಾಡಿ ಅವರಿಗೆ ನೀಡಲಾಗುವ ಮಾಸಿಕ 15 ಸಾವಿರ ರೂಪಾಯಿ ವೇತನವನ್ನು ತಮಗೆ ನೀಡುವಂತೆ ಡಿಎಫ್​ಒ ಪೂರ್ಣಿಮಾ ಅವರು ಒತ್ತಡ ಹೇರಿದ್ದರು ಎಂದು ವಿರುದ್ಧ ಉದಯ್​ ಕರವೆಕರ್​ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಅರಣ್ಯ ಇಲಾಖೆಯಿಂದ ಮಂಜೂರಾಗಿದ್ದ 1.6 ಲಕ್ಷ ರೂಪಾಯಿ ಮೊತ್ತದ ಕಾಮಗಾರಿಯಲ್ಲಿ ಡಿಎಫ್​ಒ ಪೂರ್ಣಿಮಾ ಶೇಕಡಾ 60ರಷ್ಟು ಲಂಚ ಕೇಳಿದ್ದರು. 

LEAVE A REPLY

Please enter your comment!
Please enter your name here