ಟ್ರಾಫಿಕ್​ ದಂಡ – ಶೇ.50 ರಿಯಾಯಿತಿಗೆ ಕೊನೆ ದಿನ

ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಯಲ್ಲಿ ಕರ್ನಾಟಕದಲ್ಲಿ ವಾಹನ ಸವಾರರಿಗೆ ನೀಡಲಾಗುತ್ತಿರುವ ಶೇಕಡಾ 50ರಷ್ಟು ರಿಯಾಯಿತಿ ಮಾರ್ಚ್​​ 18ರಂದು ಕೊನೆಯಾಗಲಿದೆ.

ಮಾರ್ಚ್​ 18ರೊಳಗೆ ದಂಡ ಪಾವತಿಯಲ್ಲಿ ಶೇಕಡಾ 50ರಷ್ಟು ರಿಯಾಯಿತಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಕಳೆದ ತಿಂಗಳ 11 ಅಂದರೆ ಫೆಬ್ರವರಿ 11ರವರೆಗೆ ದಾಖಲಾಗಿರುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇಕಡಾ 50ರಷ್ಟು ದಂಡ ಪಾವತಿ ರಿಯಾಯಿತಿ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಕರ್ನಾಟಕ ರಾಜ್ಯ ಪೊಲೀಸ್​ (KSP APP), ಕರ್ನಾಟಕ ಒನ್​, ಬೆಂಗಳೂರು ಒನ್​, ಪೇಟಿಎಂ ಆಪ್​ ಮೂಲಕ ದಂಡ ಪಾವತಿಗೆ ಅವಕಾಶವಿದೆ. 

LEAVE A REPLY

Please enter your comment!
Please enter your name here