BIG BREAKING: ಈಶ್ವರಪ್ಪಗೆ ಮತ್ತೆ ಶಿವಮೊಗ್ಗ ನಗರದಿಂದ ಟಿಕೆಟ್​, ಡಾ ಸರ್ಜಿಗೆ ಚನ್ನಗಿರಿ ಟಿಕೆಟ್​..?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದಿಂದ ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಅವರಿಗೇ ಟಿಕೆಟ್​ ನೀಡಲು ಬಿಜೆಪಿ ತೀರ್ಮಾನಿಸಿದೆ.

ಮೂಲಗಳ ಮಾಹಿತಿ ಪ್ರಕಾರ ಶಿವಮೊಗ್ಗ ನಗರದಲ್ಲಿ ಮತ್ತೆ ಚುನಾವಣೆಗೆ ನಿಲ್ಲಲು ಸಿದ್ಧತೆ ಚುರುಕುಗೊಳಿಸುವಂತೆ ಪಕ್ಷದ ರಾಷ್ಟ್ರೀಯ ನಾಯಕರು ಈಶ್ವರಪ್ಪ ಅವರಿಗೆ ಸೂಚಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ಈ ಬಾರಿ ಈಶ್ವರಪ್ಪಗೆ ಟಿಕೆಟ್​ ಸಿಗಲಾರದು ಎಂದು ವರದಿಯಾಗಿತ್ತು. ಎಂಎಲ್​ಸಿ ಆಯನೂರು ಮಂಜುನಾಥ್​ ಮತ್ತು ಖ್ಯಾತ ವೈದ್ಯ ಡಾ ಧನಂಜಯ್​ ಸರ್ಜಿ ಅವರು ಟಿಕೆಟ್​ ಆಕಾಂಕ್ಷಿಯಾಗಿದ್ದರು.

ಆದರೆ ಈಶ್ವರಪ್ಪ ಅವರಿಗೆ ಈ ಬಾರಿಯೂ ಟಿಕೆಟ್​ ನೀಡುವುದಕ್ಕೆ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚನ್ನಗಿರಿಯಿಂದ ಧನಂಜಯ್​ ಸರ್ಜಿಗೆ ಟಿಕೆಟ್​..?

ಚನ್ನಗಿರಿಯಿಂದ ಡಾ ಧನಂಜಯ್​ ಸರ್ಜಿ ಅವರಿಗೆ ಬಿಜೆಪಿ ಟಿಕೆಟ್​ ನೀಡುವುದು ಬಹುತೇಕ ಖಚಿತವಾಗಿದೆ.

ಮಾಡಾಳ್​ ವಿರೂಪಾಕ್ಷಪ್ಪ ಮತ್ತು ಪುತ್ರ ಪ್ರಶಾಂತ್​ ಮಾಡಾಳ್​ ವಿರುದ್ಧ ಲಂಚ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಈ ಬಾರಿ ಮಾಡಾಳ್​ ವಿರೂಪಾಕ್ಷಪ್ಪಗಾಗಲೀ ಅವರ ಪುತ್ರ ಮಾಡಾಳ್​ ಮಲ್ಲಿಕಾರ್ಜುನ್​ಗಾಗಲೀ ಟಿಕೆಟ್​ ನೀಡದೇ ಇರಲು ಬಿಜೆಪಿ ತೀರ್ಮಾನಿಸಿದೆ.

ಈ ಹಿನ್ನೆಲೆಯಲ್ಲಿ ಚನ್ನಗಿರಿ ಮೂಲದವರೇ ಆದ ಧನಂಜಯ್​ ಸರ್ಜಿ ಅವರಿಗೆ ಟಿಕೆಟ್​ ನೀಡಿದರೆ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧನಂಜಯ್​ ಸರ್ಜಿ ಮೂಲತಃ ಚನ್ನಗಿರಿಯವರು ಮತ್ತು ಲಿಂಗಾಯತ ಸಮುದಾಯದವರು. ಚನ್ನಗಿರಿಯಲ್ಲಿ ಲಿಂಗಾಯತ ಸಮುದಾಯದ ಮತಗಳು ಅಧಿಕ ಇರುವ ಹಿನ್ನೆಲೆಯಲ್ಲಿ ಮತ್ತು ಡಾ ಸರ್ಜಿ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಚಿರಪರಿಚಿತರಾಗಿರುವ ಕಾರಣ ಸರ್ಜಿ ಅವರಿಗೆ ಟಿಕೆಟ್​ ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here