ಕಂಡಕ್ಟರ್ ಮಲಗಿದ್ದ ಬಿಎಂಟಿಸಿ ಬಸ್ನಲ್ಲಿ ಬೆಂಕಿ – ಕಂಡಕ್ಟರ್ ಸಾವು

ಪ್ರಾತಿನಿಧಿಕ ಚಿತ್ರ

ರಾತ್ರಿ ನಿಲ್ಲಿಸಿದ್ದ ಬಿಎಂಟಿಸಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ನಲ್ಲಿ ಮಲಗಿದ್ದ ನಿರ್ವಾಹಕ ಬಸ್ನಲ್ಲೇ ಸಜೀವ ದಹನವಾಗಿದ್ದಾರೆ.

ಬೆಂಗಳೂರಿನ ಬ್ಯಾಡರಹಳ್ಳಿ ಬಳಿಯ ಲಿಂಗದೇವರಹಳ್ಳಿಯಲ್ಲಿ ಅವಘಢ ಸಂಭವಿಸಿದೆ.

43 ವರ್ಷದ ಬಿಎಂಟಿಸಿ ಕಂಡಕ್ಟರ್ ಮುತ್ತಯ್ಯ ಮೃತಪಟ್ಟಿದ್ದಾರೆ.

ರಾತ್ರಿ ಬಸ್ನ್ನು ನಿಲ್ದಾಣದಲ್ಲಿ ನಿಲ್ಲಿಸಿದ ಬಳಿಕ ಚಾಲಕ, ಸಿಬ್ಬಂದಿ ತಂಗುವ ಸ್ಥಳದಲ್ಲೇ ಮಲಗಿದ್ದರು ಮತ್ತು ಕಂಡಕ್ಟರ್ ಬಸ್ನಲ್ಲೇ ಮಲಗಿದ್ದರು. ಹೀಗಾಗಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಚಾಲಕ ಪ್ರಕಾಶ್ ಗಮನಕ್ಕೆ ಬಂದಿರಲಿಲ್ಲ.

ನಸುಕಿನ ಜಾವ 4.45ರ ವೇಳೆಗೆ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಗಸ್ತು ತಿರುಗುತ್ತಿದ್ದ ಪೊಲೀಸರು ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕದಳದವರು ಬಂದು ಬೆಂಕಿ ನಂದಿಸಿದರು. ಆದರೆ ನಿರ್ವಾಹಕ ಮುತ್ತಯ್ಯ ಬದುಕುಳಿಯಲಿಲ್ಲ.

LEAVE A REPLY

Please enter your comment!
Please enter your name here