ತೆಲುಗು ಸಿನಿಮಾ (Telugu Cinema) ರಂಗದ ರೆಬೆಲ್ ಸ್ಟಾರ್ (Rebel Star) ಎಂದೇ ಪ್ರಖ್ಯಾತರಾಗಿದ್ದ ಮತ್ತು ನಟ ಪ್ರಭಾಸ್ (Actor Prabhas) ಅವರ ಚಿಕ್ಕಪ್ಪ ಕೃಷ್ಣಂರಾಜು (KrishnamRaju) ನಿಧನರಾಗಿದ್ದಾರೆ.
ಇವತ್ತು ನಸುಕಿನ ಜಾವ 3.25ಕ್ಕೆ ಅವರು ಕೊನೆಸಿಯುರೆಳೆದಿದ್ದಾರೆ.
83 ವರ್ಷದ ಕೃಷ್ಣಂರಾಜು ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
1940ರಲ್ಲಿ ಜನಿಸಿದ ಇವರ ಪೂರ್ಣ ಹೆಸರು ಉಪ್ಪಲಪತಿ ವೆಂಕಟ ಕೃಷ್ಣಂರಾಜು. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಇವರು ರೆಬೆಲ್ ಸ್ಟಾರ್ ಎಂದೇ ಪ್ರಸಿದ್ಧ.
1966ರಲ್ಲಿ ಚಿಲಕ ಗೋರಿಂಕಾ (Chilaka Gorinka) ಸಿನಿಮಾ ಮೂಲಕ ನಟನೆ ಆರಂಭಿಸಿದರು. ಈ ಸಿನಿಮಾ ಆಂಧ್ರಪ್ರದೇಶದಲ್ಲಿ ಕೊಡಮಾಡಲಾಗುವ ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನು (Nandi Award) ಗೆದ್ದುಕೊಂಡಿತ್ತು.
ಆರಂಭದಲ್ಲಿ ವಿಲನ್ (Villan) ಪಾತ್ರಗಳ ಮೂಲಕ ಮನೆಮಾತಾದ ಕೃಷ್ಣಂ ರಾಜು ನಂತರದ ದಿನಗಳಲ್ಲಿ ಹೀರೋ (Hero) ಆದರು.
183 ಸಿನಿಮಾಗಳಲ್ಲಿ ನಟಿಸಿರುವ ಇವರ ಕಡೆಯ ಸಿನಿಮಾ ಕೆಲ ತಿಂಗಳ ಹಿಂದೆಯಷ್ಟೇ ಬಿಡುಗಡೆ ಆಗಿದ್ದ ಪ್ರಭಾಸ್ ನಟನೆಯ ರಾಧೆಶ್ಯಾಂ (RadheShyam).
ರಾಜಕಾರಣವನ್ನೂ ಪ್ರವೇಶಿಸಿದ್ದ (Political Entry) ಇವರು ಆರಂಭದಲ್ಲಿ ಕಾಂಗ್ರೆಸ್ (Congress) ಟಿಕೆಟ್ನಿಂದ ಸ್ಪರ್ಧಿಸಿ ಸೋತರು. ಬಳಿಕ ಬಿಜೆಪಿಗೆ (BJP) ಸೇರ್ಪಡೆ ಆಗಿ ಲೋಕಸಭಾ ಸಂಸದರಾಗಿ (Loksabha MP) ಆಯ್ಕೆ ಆಗಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajapayee) ಸರ್ಕಾರದಲ್ಲಿ ಸಚಿವರಾಗಿದ್ದರು.
ಕರ್ನಾಟಕದಲ್ಲಿ ಮತ್ತೆ ಧಾರಾಕಾರ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಇವತ್ತಿನಿಂದ ಸೋಮವಾರ ಬೆಳಗ್ಗಿನವರೆಗೂ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 14ರಂದು ಬುಧವಾರ: ಬೆಂಗಳೂರು ನಗರ, ತುಮಕೂರು, ರಾಮನಗರ,...
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತವ ಪ್ರದೇಶಗಳಿಗೆ ಇಂದೂ ಸಹ ಲೋಕಸಭೆ ವಿಪಕ್ಷನಾಯಕ ರಾಹುಲ್ ಗಾಂಧಿ ಭೇಟಿ ನೀಡಿದರು. ಇದೊಂದು ಭಯಾನಕ ದುರಂತ ವಾಗಿದ್ದು, ಸಂತ್ರಸ್ತರ ಕಾಳಜಿ ವಹಿಸುವ...
ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಜೊತೆಯಾಗಿ ನಡೆಸಬೇಕಿದ್ದ ಪಾದಯಾತ್ರೆ ಮುಂದೂಡಿಕೆಯಾಗಿದೆ....