ವರ್ಷಕ್ಕೊಂದು ಬಾರಿ ದರ್ಶನ ನೀಡುವ ಹಾಸನಾಂಬೆ (Hasanambe) ದೇಗುಲದ ಬಾಗಿಲು ಈ ವರ್ಷ ಅಕ್ಟೋಬರ್ 15ರಂದು ತೆರೆಯಲಿದೆ.
ಅಕ್ಟೋಬರ್ 27ರವರೆಗೆ 12 ದಿನ ಭಕ್ತರು ಹಾಸನಾಂಬೆ ದರ್ಶನ ಪಡೆಯಬಹುದು.
15 ದಿನಗಳಲ್ಲಿ ಪೈಕಿ ಹಾಸನಾಂಬೆ ದೇಗುಲದ ಬಾಗಿಲು ತೆರೆಯುವ ಮೊದಲ ದಿನ ಮತ್ತು ಕೊನೆಯ ದಿನ ಹಾಗೂ ಸೂರ್ಯಗ್ರಹಣ ಇರುವ ಕಾರಣ ಅಕ್ಟೋಬರ್ 25ರಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ಆಶ್ವೀಜ ಮಾಸದ ಮೊದಲ ಗುರುವಾರ ದೇಗುಲದ ಬಾಗಿಲು ತೆರೆಯಲಾಗುತ್ತದೆ. ವರ್ಷದ ಹಿಂದೆ ಬೆಳಗಿದ ದೀಪ ಮುಂದಿನ ವರ್ಷ ಬಾಗಿಲು ತೆರೆಯುವರೆಗೂ ಆರುವುದಿಲ್ಲ ಎನ್ನುವುದು ಹಾಸನಾಂಬೆ ದೇವಿಯ ಮಹಿಮೆ.
ಎರಡು ವರ್ಷಗಳಿಂದ ಕೋವಿಡ್ ನಿಯಮಗಳಿಂದ ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಈ ಬಾರಿ ಅದ್ಧೂರಿಯಾಗಿ ಹಾಸನಾಂಬೆ ಜಾತ್ರೆಯನ್ನು ಆಚರಿಸಲಾಗುತ್ತದೆ ಎಂದು ಹಾಸನ ಶಾಸಕ ಪ್ರೀತಂಗೌಡ (MLA Preetham Gowda) ಅವರು ಹೇಳಿದ್ದಾರೆ.
ಕೆಲವೇ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಸಿ ಭಕ್ತರಿಗೆ ದರ್ಶನಕ್ಕೆ ಸಮಯ ನಿಗದಿ, ಮೂಲಭೂತ ಸೌಕರ್ಯ ಸೇರಿದಂತೆ ಸಮಾಲೋಚಿಸಲಾಗುತ್ತದೆ ಎಂದು ಶಾಸಕರು ಹೇಳಿದರು.
ADVERTISEMENT
ADVERTISEMENT