ವಂಚನೆ ಪ್ರಕರಣ ಸಂಬಂಧ ಅಪರಾಧ ತನಿಖಾ ದಳ (CID) ಮಂತ್ರಿ ಡೆವೆಲಪರ್ಸ್ ಮಾಲೀಕ ಸುಶೀಲ್ ಪಿ ಮಂತ್ರಿ (Susheel P Mantri) ಮತ್ತು ಆತನ ಮಗ ಪ್ರತೀಕ್ ಮಂತ್ರಿ (Pratik Mantri)ಯನ್ನು ಬಂಧಿಸಿದೆ.
ಇವರಿಬ್ಬರ ವಿರುದ್ಧವೂ ಬೆಂಗಳೂರಿನ (Bengaluru) ಕಬ್ಬನ್ ಪಾರ್ಕ್ (Cubbon Park) ಪೊಲೀಸ್ ಠಾಣೆಯಲ್ಲಿ 2019ರಲ್ಲಿ ಎರಡು ವಂಚನೆ ಪ್ರಕರಣ (Cheating Case) ದಾಖಲಾಗಿತ್ತು.
ಸುಶೀಲ್ ಮಂತ್ರಿ ಬೆಂಗಳೂರಿನ ಪ್ರತಿಷ್ಠಿತ ಕಟ್ಟಡ ನಿರ್ಮಾಣ ಕಂಪನಿ ಮಂತ್ರಿ ಡೆವೆಲಪರ್ಸ್ನ (Mantri Developers) ಮಾಲೀಕರಾಗಿದ್ದಾರೆ.
ಗ್ರಾಹಕರಿಂದ ಹಣ ಸಂಗ್ರಹಿಸಿದ್ದ ಮಂತ್ರಿ ಡೆವೆಲಪರ್ಸ್ ಆ ಬಳಿಕ ಪ್ಲ್ಯಾಟ್ಗಳನ್ನು ನೀಡದೇ ವಂಚನೆ ಮಾಡಿದ್ದರ ಸಂಬಂಧ ಕಬ್ಬನ್ ಪಾರ್ಕ್ ಠಾಣೆಗೆ ಗ್ರಾಹಕರು ದೂರು ನೀಡಿದ್ದರು.
ಕೆಲ ತಿಂಗಳ ಹಿಂದೆಯಷ್ಟೇ ಸುಶೀಲ್ ಮಂತ್ರಿಯನ್ನು ಜಾರಿ ನಿರ್ದೇಶನಾಲಯ (ED) ಅಕ್ರಮ ಹಣ ವರ್ಗಾವಣೆ (Money Laundering) ಪ್ರಕರಣದಲ್ಲಿ ಬಂಧಿಸಿತ್ತು. ಅಲ್ಲದೇ ಮಂತ್ರಿ ಡೆವಲಪರ್ಸ್ಗೆ ಸೇರಿದ 300 ಕೋಟಿ ರೂಪಾಯಿ ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿತ್ತು.
ಶುಕ್ರವಾರ ಸುಶೀಲ್ ಮಂತ್ರಿಯನ್ನು ಬಂಧಿಸಿರುವ ಸಿಐಡಿ ಶನಿವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ಸೆಪ್ಟೆಂಬರ್ 12ರವರೆಗೆ ಅಪ್ಪ-ಮಗ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಲಾಗಿದೆ.
ಸೋಮವಾರ ಇಬ್ಬರನ್ನೂ ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ನೀಡುವಂತೆ ಸಿಐಡಿ ಕೋರ್ಟ್ಗೆ ಕೋರುವ ಸಾಧ್ಯತೆ ಇದೆ.
ADVERTISEMENT
ADVERTISEMENT