ಖ್ಯಾತ ತೆಲುಗು ನಟ ನಂದಮೂರಿ ತಾರಕರತ್ನ ಇನ್ನಿಲ್ಲ . 39 ವರ್ಷ ವಯಸ್ಸಿನ ಇವರು ಇವತ್ತು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಂದಮೂರಿ ತಾರಕರತ್ನ ಅವರು ಪ್ರಸಿದ್ಧ ತೆಲುಗು ನಟ ಮತ್ತು ಆಂಧ್ರಪ್ರದೇಶ ಸಿಎಂ ಆಗಿದ್ದ ಎನ್ ಟಿ ರಾಮರಾವ್ ಅವರ ಮೊಮ್ಮಗ.
ನಂದಮುರಿ ಬಾಲಕೃಷ್ಣ, ಜ್ಯೂನಿಯರ್ ಎನ್ಟಿಆರ್ ಇವರ ಸಂಬಂಧಿ.
ಕಳೆದ ತಿಂಗಳು ಅಂದರೆ ಜನವರಿ 23ರಂದು ಆಂಧ್ರದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಮಗ ನಾರಾ ಲೋಕೇಶ್ ಕೈಗೊಂಡಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವೇಳೆ ನಂದಮೂರಿ ತಾರಕರತ್ನ ಅವರಿಗೆ ಹೃದಯಾಘಾತವಾಗಿತ್ತು.
ತುರ್ತು ಚಿಕಿತ್ಸೆಯ 45 ನಿಮಿಷಗಳ ಬಳಿಕ ಅವರಿಗೆ ಪ್ರಜ್ಞೆ ಬಂದಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿರುವ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು.
ADVERTISEMENT
ADVERTISEMENT