ನಟ ದರ್ಶನ್ ಅಭಿಮಾನಿಗಳ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೆಂಡಾಮಂಡಲರಾಗಿದ್ದಾರೆ.
ನೀವು ಹಾಕುವ ವೀಡಿಯೋ, ಇಮೇಜಸ್ ಮತ್ತು ಇತರೆ ಪೋಸ್ಟ್ನಿಂದ ನನ್ನ ಕುಟುಂಬಕ್ಕೆ ಡ್ಯಾಮೇಜ್ ಆಗ್ತಿದೆ ಎಂದು ವಿಜಯಲಕ್ಷ್ಮೀ ಕಿಡಿಕಾರಿದ್ದಾರೆ.
ತಕ್ಷಣವೇ ನನ್ನ ಕುಟುಂಬಕ್ಕೆ ಡ್ಯಾಮೇಜ್ ಮಾಡುವ ವೀಡಿಯೋ, ಇಮೇಜ್, ಇತರೆ ಪೋಸ್ಟ್ಗಳನ್ನು ಹಾಕುವುದನ್ನು ಮತ್ತು ಹಂಚಿಕೊಳ್ಳುವುದನ್ನು ನಿಲ್ಲಿಸುವಂತೆ ವಿಜಯಲಕ್ಷ್ಮೀ ದರ್ಶನ್ ಅಭಿಮಾನಿಗಳಿಗೆ ಒತ್ತಾಯಿಸಿದ್ದಾರೆ.
ಮಹಿಳೆಯಾಗಿ ಇಂಥಹ ವೀಡಿಯೋವನ್ನು ಪೋಸ್ಟ್ ಮಾಡುವುದಕ್ಕಿಂತ ಮುಂಚೆ ಎರಡು ಬಾರಿ ಯೋಚನೆ ಮಾಡ್ಬೇಕು. ಈ ವೀಡಿಯೋದಿಂದ ನನಗೆ ಮತ್ತು ನನ್ನ ಮಗನಿಗೆ ತುಂಬಾ ನೋವಾಗಿದೆ.
ಇಂತಹ ವೀಡಿಯೋ ಪೋಸ್ಟ್ ಮಾಡುವ ನಿಮ್ಮ ವರ್ತನೆ ನಿಮ್ಮ ವ್ಯಕ್ತಿತ್ವದ ನೈತಿಕತೆಯನ್ನು ತೋರಿಸುತ್ತದೆ.
ಜೊತೆಗೆ ಇನ್ನೊಂದು ಹೇಳಲು ಬಯಸುತ್ತೇನೆ,
ನನ್ನ ಮೌನ ನಾನು ತಲೆಹರಟೆಗಳನ್ನು ಸುಮ್ಮನೆ ಬಿಡುತ್ತೇನೆ ಎಂದು ಅರ್ಥವಲ್ಲ