BREAKING NEWS: ನಟ ದರ್ಶನ್​ ಅಂಗರಕ್ಷಕರಿಂದ ಮಾಧ್ಯಮದವರ ಮೇಲೆ ಹಲ್ಲೆ, ದೂರು ಸಲ್ಲಿಕೆ – FIRಗೆ ಪೊಲೀಸರ ಹಿಂದೇಟು

ಯೂಟ್ಯೂಬ್​ ಚಾನೆಲ್​ನ ವರದಿಗಾರ ಮತ್ತು ಕ್ಯಾಮರಾಮ್ಯಾನ್​ ಮೇಲೆ ಹಲ್ಲೆ ನಡೆಸಿದ್ದರ ಸಂಬಂಧ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಂಗರಕ್ಷಕರ ವಿರುದ್ಧ ದೂರು ದಾಖಲಾಗಿದೆ.
ವಿ2 ನ್ಯೂಸ್​ ಡಿಜಿಟಲ್​ ಮೀಡಿಯಾದ ವರದಿಗಾರ ಮಧುಸೂದನ್​ ಮತ್ತು ಕ್ಯಾಮರಾಮ್ಯಾನ್​ ದಯಾನಂದ್​ ಮೇಲೆ ನಟ ದರ್ಶನ್​ ಅವರ ಅಂಗರಕ್ಷಕರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಘಟನೆ ಸಂಬಂಧ ಫೆಬ್ರವರಿ 17ರಂದು ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಆದರೆ ಎಫ್​ಐಆರ್​ ದಾಖಲಿಸುವ ಬದಲು ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಎನ್​ಸಿಆರ್​ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಭೇಟಿಯಾಗಿ ದೂರು ಸಲ್ಲಿಸುವುದಾಗಿ
ವಿ2 ನ್ಯೂಸ್​ ಡಿಜಿಟಲ್​ ಮೀಡಿಯಾದ ಸಿಇಒ ಸೂರ್ಯ ಅವರು ವೀಡಿಯೋ ಮೂಲಕ ಹೇಳಿದ್ದಾರೆ.
ದರ್ಶನ್​ ಮನೆಯ ಬಳಿ ಆಗಿದ್ದೇನು..?
ಅರ್ಜಿದಾರರ ಮಧುಸೂದನ್​ ಮತ್ತು ದಯಾನಂದ್​ ವಿ2 ನ್ಯೂಸ್​ ಚಾನೆಲ್​ನಲ್ಲಿ ಕೆಲಸ ಮಾಡುತ್ತಿದ್ದು, ಫೆಬ್ರವರಿ 16ರಂದು ಸಂಜೆ 6-15 ಗಂಟೆಗೆ ಚಲನಚಿತ್ರ ನಟ ದರ್ಶನ್​ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರೀಕರಣ ಮಾಡಲು ಹೋಗಿದ್ದ ಸಂದರ್ಭದಲ್ಲಿ ಚಲನಚಿತ್ರ ನಟ ದರ್ಶನ್​ರವರು ಮನೆ ಬಳಿ ಇಲ್ಲದೇ ಇರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ.
ದರ್ಶನ್​ ಮನೆಯ ಬಳಿ ಇದ್ದ ಸಫಾರಿ ವಸ್ತ್ರ ಧರಿಸಿದ್ದ ಮತ್ತು ದರ್ಶನ್​ ಭಾವಚಿತ್ರ ಇರುವ ಟೀ ಶರ್ಟ್​​ ಧರಿಸಿದ್ದ 4ರಿಂದ 5 ಅಸಾಮಿಗಳು ಚಿತ್ರೀಕರಣ ಮಾಡದಂತೆ ತಡೆದು ಇಬ್ಬರಿಗೂ ಕೈಗಳಿಂದ ಹೊಡೆದು ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ
ಎಂದು ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here