No Result
View All Result
ಮಹಾಶಿವರಾತ್ರಿಯಂದು ನಟ ಶಿವರಾಜ್ಕುಮಾರ್ ಅವರ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ.
ಶಿವಣ್ಣ ಅವರ ಹೊಸ ಸಿನಿಮಾದ ಹೆಸರು ಭೈರತಿ ರಣಗಲ್.
ಸಿನಿಮಾದ ಪೋಸ್ಟರ್ನ್ನು ಹಂಚಿಕೊಂಡಿರುವ ಶಿವಣ್ಣ ಅವರು ಮಡಚಿಟ್ಟಿದ್ದ ಅಧ್ಯಾಯ ಪುನಾರಂಭ ಎಂದು ಬರೆದುಕೊಂಡಿದ್ದಾರೆ.
ಮಫ್ತಿ ಸಿನಿಮಾವನ್ನು ನಿರ್ದೇಶಿಸಿದ್ದ ನರ್ತನ್ ಅವರು ಈ ಸಿನಿಮಾವನ್ನು ನಿರ್ದೇಶಿಸ್ತಿದ್ದು ಗೀತಾ ಶಿವರಾಜ್ಕುಮಾರ್ ಅವರು ಸಿನಿಮಾ ನಿರ್ಮಿಸ್ತಿದ್ದಾರೆ.
ಇದು ಶಿವರಾಜ್ಕುಮಾರ್ ಅವರ 126ನೇ ಸಿನಿಮಾ. ಮಫ್ತಿ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರ ಪಾತ್ರದ ಹೆಸರೇ ಭೈರತಿ ರಣಗಲ್.
ಹೀಗಾಗಿ ಇದು ಮಫ್ತಿ ಸಿನಿಮಾದ ಮುಂದುವರಿದ ಭಾಗ ಎಂದು ತಿಳಿದುಬಂದಿದೆ.
ಮಫ್ತಿ ಸಿನಿಮಾದಲ್ಲಿ ಮರದ ಕುರ್ಚಿಯಲ್ಲಿ ಕಪ್ಪು ಬಣದ ಲುಂಗಿ ಮತ್ತು ಅಂಗಿಯಲ್ಲಿ ಶಿವಣ್ಣ ಅವರು ಕೂರುವ ದೃಶ್ಯವಿದೆ.
ಭೈರತಿ ರಣಗಲ್ ಸಿನಿಮಾದ ಪೋಸ್ಟರ್ನಲ್ಲೂ ಅದೇ ಇದೆ.
No Result
View All Result
error: Content is protected !!