ಚಿರಂಜೀವಿ ಸರ್ಜಾ ನಿಧನರಾಗಿ 2 ವರ್ಷ 8 ತಿಂಗಳು. 2020ರ ಜೂನ್ 7ರಂದು ಭಾನುವಾರದಂದು ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ನಿಧನರಾಗಿದ್ದರು.
ಆ ಬಳಿಕ ಮುಂದೇನು ಎಂಬ ಪ್ರಶ್ನೆಯನ್ನು ಬಹುತೇಕರು ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರಿಗೆ ಕೇಳುತ್ತಿದ್ದರು.
ಆ ಪ್ರಶ್ನೆಗೆ ಮೇಘನಾ ರಾಜ್ ಇವತ್ತು ಬೆಳಗ್ಗೆ 10 ಗಂಟೆ 35 ನಿಮಿಷಕ್ಕೆ ಉತ್ತರಿಸಲಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾ ಗ್ರಾಂನಲ್ಲೇ ಮೇಘನಾರಾಜ್ ಬರೆದುಕೊಂಡಿದ್ದಾರೆ.
2020, ಭಾನುವಾರ ನನ್ನ ಬದುಕಿನಲ್ಲಿ ದೊಡ್ಡ ಬದಲಾವಣೆ ಆದ ದಿನ. ಆ ಬಳಿಕ ನನಗೆ ಎಲ್ಲರೂ ಒಂದು ಸಹಜವಾದ ಪ್ರಶ್ನೆಯನ್ನು ಕೇಳುತ್ತಿದ್ದರು, ಆ ಒಂದು ಪ್ರಶ್ನೆ.
ನಾಳೆ (ಅಂದರೆ ಇವತ್ತು) ಭಾನುವಾರ ನಾನು ಪ್ರಶ್ನೆಗೆ ಉತ್ತರಿಸಲು ನಿರ್ಧರಿಸಿದ್ದೇನೆ.
ಫೆಬ್ರವರಿ 19, ಬೆಳಗ್ಗೆ 10.35ಕ್ಕೆ
ಎಂದು ತಮ್ಮ ಇನ್ಸ್ಟಾ ಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ADVERTISEMENT
ADVERTISEMENT