ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ ಲಿಂಗಾಯತ ಮುಖಂಡ ಕಾಂಗ್ರೆಸ್​ಗೆ ಸೇರ್ಪಡೆ..?

K S Kiran Kumar Chikkanayakanahalli Ex MLA with BS Yediyurappa
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆಗೆ ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಕೆ ಎಸ್​ ಕಿರಣ್​ ಕುಮಾರ್​

ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಮತ್ತೋರ್ವ ಲಿಂಗಾಯತ ಮುಖಂಡ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್​​ಗೆ ಸೇರ್ಪಡೆ ಆಗುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ, ಚಿಕ್ಕನಾಯಕನಹಳ್ಳಿ (Chikkanayakanahalli Assembly Constituency) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ ಎಸ್​ ಕಿರಣ್​ ಕುಮಾರ್​ ಅವರು ಸೋಮವಾರ ಕಾಂಗ್ರೆಸ್​​ಗೆ ಸೇರ್ಪಡೆ ಆಗಲಿದ್ದಾರೆ.

ರಾಜ್ಯ ಜೈವಿನ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕಿರಣ್​ ಕುಮಾರ್​ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರವಾನಿಸಿದ್ದಾರೆ.  

ಕಿರಣ್​ ಕುಮಾರ್​ ಅವರು ಈ ಬಾರಿ ಬಿಜೆಪಿಯಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಟಿಕೆಟ್​ ಬಯಸಿದ್ದರು. ಆದರೆ ಸಚಿವ ಜೆ ಸಿ ಮಾಧುಸ್ವಾಮಿ ಅವರಿಗೆ ಈ ಬಾರಿ ಮತ್ತೆ ಟಿಕೆಟ್​ ಕೊಡುವುದು ಖಚಿತ ಆಗಿರುವ ಪಕ್ಷ ಬದಲಾವಣೆಗೆ ಕಿರಣ್​ ಕುಮಾರ್​​ ನಿರ್ಧರಿಸಿದ್ದಾರೆ.

2008, 2013ರಲ್ಲಿ ಕಿರಣ್​ ಕುಮಾರ್​ ಬಿಜೆಪಿ ಟಿಕೆಟ್​ನಿಂದ ಸ್ಪರ್ಧಿಸಿ ಸೋತಿದ್ದರು. ಆದರೆ 2018ರಲ್ಲಿ ಕೆಜೆಪಿಯಲ್ಲಿದ್ದ ಮಾಧುಸ್ವಾಮಿ ಅವರು ಬಿಜೆಪಿಗೆ ಬಂದಿದ್ದರಿಂದ 2018ರಲ್ಲಿ ಕಿರಣ್​ ಕುಮಾರ್​ ಅವರಿಗೆ ಟಿಕೆಟ್​ ಕೈ ತಪ್ಪಿ ಮಾಧುಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್​ ನೀಡಿತ್ತು.

ಈ ಬಾರಿಯೂ ನಾನೇ ಬಿಜೆಪಿ ಅಭ್ಯರ್ಥಿ ಎಂದು ಸ್ವತಃ ಸಚಿವ ಮಾಧುಸ್ವಾಮಿ ಅವರು ಘೋಷಿಸಿಕೊಂಡಿರುವ ಕಾರಣ ಕಿರಣ್​ ಕುಮಾರ್​ ಕಾಂಗ್ರೆಸ್​ ಸೇರಲು ನಿರ್ಧರಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಟಿಕೆಟ್​ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

 

LEAVE A REPLY

Please enter your comment!
Please enter your name here