Swaroopananda Swamiji : ಶ್ರೀರಾಮ ಮಂದಿರಕ್ಕಾಗಿ ಹೋರಾಡಿದ್ದ ಸ್ವಾಮೀಜಿ ಇನ್ನಿಲ್ಲ

Swaroopananda Swamiji

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ್ದ ಮಧ್ಯಪ್ರದೇಶದ ದ್ವಾರಕಾ ಜ್ಯೋತಿರ್ಮಠದ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ(99) (Swaroopananda Swamiji) ಇಂದು ನಿಧನರಾಗಿದ್ದಾರೆ.

ಸ್ವರೂಪಾನಂದ ಸರಸ್ವತಿ ಸ್ವಾಮೀಜಿಯವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಪರಮಹಂಸಿ ಗಂಗಾ ಆಶ್ರಮದಲ್ಲಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ : ರಾಮ ಮಂದಿರ ನಿರ್ಮಾಣ ಕಾಮಗಾರಿ – ಉಪಗ್ರಹ ಚಿತ್ರಗಳು

ಸ್ವಾಮಿ ಸ್ವರೂಪಾನಂದ ಸರಸ್ವತಿಯವರು (Swaroopananda Swamiji) 1924ರ ಸೆಪ್ಟೆಂಬರ್ 2ರಂದು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಜಬಲ್‌ಪುರ ಸಮೀಪದ ದಿಘೋರಿ ಗ್ರಾಮದಲ್ಲಿ ಜನಿಸಿದ್ದರು. ತಂದೆ ಧನಪತಿ ಉಪಾಧ್ಯಾಯ ಮತ್ತು ತಾಯಿ ಗಿರಿಜಾ ದೇವಿ ಅವರ ಪುತ್ರರಾಗಿದ್ದು, ಪೋತಿರಾಮ್ ಉಪಾಧ್ಯಾಯ ಎಂದು ನಾಮಕರಣ ಮಾಡಿದ್ದರು.

ಎರಡು ದಿನದ ಹಿಂದೆಯಷ್ಟೇ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ್ದ ಶತಾಯುಷಿ ಬಿಲ್ ಲಾಲ್ ಮರಣವನ್ನಪ್ಪಿದ್ದರು. ಇದನ್ನೂ ಓದಿ : ಅಯೋಧ್ಯೆ ನಿರ್ಮಾಣ: ಹರಿದು ಬಂತು ಬರೋಬ್ಬರಿ 2,100 ಕೋಟಿ ರೂ. ದೇಣಿಗೆ

LEAVE A REPLY

Please enter your comment!
Please enter your name here