ಕರ್ನಾಟಕದಲ್ಲಿ ಹಾಲಿನ ದರ (Milk Price) ಹೆಚ್ಚಳ ಆಗುವ ನಿರೀಕ್ಷೆ ಇದೆ.
ಹಾಲಿನ ದರವನ್ನು ಲೀಟರ್ಗೆ 3 ರೂಪಾಯಿ ಹೆಚ್ಚಳ ಮಾಡುವ ಪ್ರಸ್ತಾಪವನ್ನು ಶುಕ್ರವಾರ ನಡೆದ ತನ್ನ ವಾರ್ಷಿಕ ಮಹಾಸಭೆಯಲ್ಲಿ ಕೆಎಂಎಫ್ (KMF) ಅನುಮೋದಿಸಿದೆ.
ಆದರೆ ಕೆಎಂಎಫ್ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರದಿಂದ ಇನ್ನಷ್ಟೇ ಅನುಮತಿ ಸಿಗಬೇಕಿದೆ. ಹಾಲಿನ ದರ ಏರಿಕೆ ಪ್ರಸ್ತಾಪಕ್ಕೆ ನಿಯಮಗಳ ಪ್ರಕಾರ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಗುವುದು ಅನಿವಾರ್ಯ.
ಲೀಟರ್ಗೆ ಮೂರು ರೂಪಾಯಿ ಹೆಚ್ಚಳದ ಮೊತ್ತವನ್ನು ನೇರವಾಗಿ ರೈತರಿಗೆ ವರ್ಗಾಯಿಸುವ ತೀರ್ಮಾನವನ್ನು ಕೆಎಂಎಪ್ ತೆಗೆದುಕೊಂಡಿದೆ.
ಸದ್ಯಕ್ಕೆ ಕರ್ನಾಟಕದಲ್ಲಿ ನಂದಿನಿ ಹಾಲಿಗೆ ಲೀಟರ್ಗೆ 37 ರೂಪಾಯಿ. ಹಾಲು ಒಕ್ಕೂಟಗಳ ಪ್ರಕಾರ ಅಕ್ಕಪಕ್ಕದ ರಾಜ್ಯಗಳಲ್ಲಿ ಒಂದು ಲೀಟರ್ ಹಾಲಿನ ವೆಚ್ಚ 50 ರೂಪಾಯಿ. ಹೈನುಗಾರಿಕೆ ವೆಚ್ಚದಿಂದ ಹಾಲು ಉತ್ಪಾದಕರಿಗೂ ಹೊರೆಯಾಗುತ್ತಿದೆ.
14 ಹಾಲು ಒಕ್ಕೂಟಗಳು ಹಾಲಿನ ಬೆಲೆ ಏರಿಕೆಗೆ ಕೆಎಂಎಫ್ ಮೇಲೆ ಒತ್ತಡ ಹೇರಿದ್ದವು. ಅಲ್ಲದೇ ಹಾಲಿನ ಬೆಲೆಯನ್ನು ಲೀಟರ್ಗೆ 5 ರೂಪಾಯಿಯಷ್ಟು ಹೆಚ್ಚಳ ಮಾಡುವಂತೆ ಆಗ್ರಹಿಸಿ ಸೆಪ್ಟೆಂಬರ್ 22ರಂದು ಬೆಂಗಳೂರಲ್ಲಿ ಬೃಹತ್ ಜಾಥಾ ಮಾಡುವ ಬಗ್ಗೆ ಮಂಡ್ಯ, ಕೋಲಾರ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಹಾಲು ಒಕ್ಕೂಟಗಳು ಎಚ್ಚರಿಕೆ ನೀಡಿದ್ದವು.
ADVERTISEMENT
ADVERTISEMENT