ಹೈಕೋರ್ಟ್​​ಗಳಲ್ಲಿ ರಾಜ್ಯಭಾಷೆಗಳ ಬಳಕೆಗೆ ಒಪ್ಪಿಗೆ ನೀಡದ ಸುಪ್ರೀಂಕೋರ್ಟ್​

ರಾಜ್ಯಗಳಲ್ಲಿರುವ ಹೈಕೋರ್ಟ್​​ನಲ್ಲಿ ಆಯಾಯ ರಾಜ್ಯದ ಪ್ರಾದೇಶಿಕ ಭಾಷೆಗಳನ್ನು ಬಳಕೆ ಮಾಡುವ ಬಗ್ಗೆ ಸುಪ್ರೀಂಕೋರ್ಟ್​​ ಸಮ್ಮತಿ ಸೂಚಿಸಿಲ್ಲ.

ಕರ್ನಾಟಕ ಹೈಕೋರ್ಟ್​ನಲ್ಲಿ ಕನ್ನಡ, ಮದ್ರಾಸ್​ ಹೈಕೋರ್ಟ್​ನಲ್ಲಿ ತಮಿಳು, ಛತ್ತೀಸ್​ಗಢ ಹೈಕೋರ್ಟ್​ನಲ್ಲಿ ಹಿಂದಿ, ಕೋಲ್ಕತ್ತಾ ಹೈಕೋರ್ಟ್​ನಲ್ಲಿ ಬೆಂಗಾಲಿ ಮತ್ತು ಗುಜರಾತ್​ ಹೈಕೋರ್ಟ್​ನಲ್ಲಿ ಗುಜರಾತಿ ಭಾಷೆಯನ್ನು ಬಳಸುವ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.

ಆದರೆ ಈ ಹೈಕೋರ್ಟ್​ಗಳಲ್ಲಿ ಪ್ರಾದೇಶಿಕ ಭಾಷೆ ಬಳಕೆ ಸಂಬಂಧ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸುಪ್ರೀಂಕೋರ್ಟ್​ ಆ ಪ್ರಸ್ತಾವನೆಯನ್ನು ಒಪ್ಪಿಕೊಂಡಿಲ್ಲ.

ಸುಪ್ರೀಂಕೋರ್ಟ್​​ನ ಈ ತೀರ್ಮಾನದ ಬಳಿಕ ತಮಿಳುನಾಡು ಮತ್ತೊಮ್ಮೆ ರಾಜ್ಯ ಭಾಷೆಯಾಗಿರುವ ತಮಿಳನ್ನು ಹೈಕೋರ್ಟ್​ನಲ್ಲಿ ಬಳಕೆ ಮಾಡುವ ಬಗ್ಗೆ ಪ್ರಸ್ತಾಪನೆಯನ್ನು ಸಲ್ಲಿಸಿತ್ತು.

ಆ ಎರಡನೇ ಪ್ರಸ್ತಾವನೆಯನ್ನು ಎರಡನೇ ಬಾರಿಯೂ ಸುಪ್ರೀಂಕೋರ್ಟ್​ ಸ್ವೀಕರಿಸದೇ ತನ್ನ ಮೊದಲ ನಿರ್ಧಾರವನ್ನೇ ಪುನಚ್ಚರಿಸಿದೆ.

LEAVE A REPLY

Please enter your comment!
Please enter your name here